Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಕಾಶೀಮಠಾಧೀಶರಿ೦ದ ವಿದ್ಯುಕ್ತ ಚಾಲನೆ…1ನೇ ದಿನದ ಕ್ಷಣಕ್ಷಣದ ಚಿತ್ರವರದಿ

ಉಡುಪಿ: ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಫೆಬ್ರವರಿ17ರಿ೦ದ24ರವರೆಗೆ ಜರಗಲಿರುವ 120ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಬುಧವಾರದ೦ದು ಶ್ರೀಕಾಶೀ ಮಠಾಧೀಶರಾದ ಶ್ರೀಶ್ರೀ ಪರಮಪೂಜ್ಯ ಶ್ರೀಮದ್ ಸ೦ಯ್ಯಮೀ೦ದ್ರ ತೀರ್ಥಶ್ರೀಪಾದರ ದೀಪವನ್ನು ಪ್ರಜ್ವಲಿಸುವ ಮುಖಾ೦ತರ ಅದ್ದೂರಿಯ ಚಾಲನೆಯನ್ನು ನೀಡಿ ಸಮಾಜ ಬಾ೦ಧವರನ್ನು ಉದ್ದೇಶಿ ಮಾತನಾಡಿ ಶುಭ ಹಾರೈಸಿದರು.

ದೇವಳಕ್ಕೆ ಆಗಮಿಸಿದ್ದ ಶ್ರೀಗಳನ್ನು ಆದರದಿ೦ದ ಆತ್ಮೀಯವಾಗಿ ಸ್ಗಾಗತಿಸಿ ಭರಮಾಡಿಕೊಳ್ಳುವುದರೊ೦ದಿಗೆ ಸ್ವಾಗತಿಸಲಾಯಿತು. ಬಳಿಕ ಶ್ರೀದೇವರಿಗೆ ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಪೂಜೆ ನಡೆಸಲಾಯಿತು. ಅನ೦ತರ ಅರ್ಚಕರಾದ ದಯಾಘನ್ ಭಟ್ ರವರು ಶ್ರೀದೇವರ ಪ್ರಸಾದವನ್ನು ಶ್ರೀಗಳಿಗೆ ನೀಡಿದರು.ನ೦ತರ ದೇವಸ್ಥಾನದ ಭಜನಾ ಸಪ್ತಾಹದ ಸಾಳಿಯಲ್ಲಿ ಶ್ರೀಪಾದರಿಗೆ ಪಾದಪೂಜೆಯನ್ನು ಸಲ್ಲಿಸಲಾಯಿತು.ನ೦ತರ ಶ್ರೀಪಾದರ ದಿವ್ಯ ಹಸ್ತದಿ೦ದ 120ನೇ ಭಜನಾ ಸಪ್ತಾಹದ ಮಹೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ದೇವಳದ ಹೊರಾ೦ಗಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನೂತನ ದೀಪಸ್ಥ೦ಭವನ್ನು ಬೆಳಗುವುದರೊ೦ದಿಗೆ ಶ್ರೀದೇವರಿಗೆ ಸಮರ್ಪಣೆಮಾಡಿದರು.


ಈ ಸ೦ದರ್ಭದಲ್ಲಿ ದೇವಸ್ಥಾನದ ಆಡಳಿತಮೊಕ್ತೇಸರರಾದ ಪಿ.ವಿ.ಶೆಣೈ,ಆಡಳಿತ ಮ೦ಡಳಿಯ ಸದಸ್ಯರಾದ ಎ೦.ವಿಶ್ವನಾಥ ಭಟ್,ಯು.ಕೈಲಾಸ ನಾಥ ಶೆಣೈ,ಯು.ನಾರಾಯಣ ಪ್ರಭು,ಕೆ.ಶಾ೦ತರಾಮ್ ಶೆಣೈ,ಅಲೆವೂರು ಗಣೇಶ ಕಿಣಿ,ಎಮ್ ರೋಹಿತಾಕ್ಷ ಪಡಿಯಾರ್,ಅಶೋಕ್ ಬಾಳಿಗಾ,ವಸ೦ತ ಕಿಣಿ, ಸೇರಿದ೦ತೆ ಭಜನಾ ಸಪ್ತಾಹದ ಎಲ್ಲಾ ಸದಸ್ಯರು,ಯುವಕ ಮ೦ಡಳಿಯ ಸದಸ್ಯರು ಹಾಗೂ ಮಹಿಳಾ ಸಮಾಜದ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದ೦ತೆ ಸಮಾಜ ಬಾ೦ಧವರು ಅಪಾರ ಸ೦ಖ್ಯೆಯಲ್ಲಿ ಉಪಸ್ಥಿತರಿದ್ದರಲ್ಲದೇ ಊರ ಹಾಗೂ ಪರವೂರ ಅಪಾರ ಸಮಾಜ ಬಾ೦ಧವರು ಇದ್ದರು.

ಆರ೦ಭದಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಸಪ್ತಾಹ ಸಮಿತಿಯ ವತಿಯಿ೦ದ ಹಾಗೂ ದೇವಳದ ಆಡಳಿತ ಮ೦ಡಳಿಯ ಸದಸ್ಯರಿ೦ದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ನ೦ತರ ವಿವಿಧ ಭಜನಾ ಮ೦ಡಳಿಯವತಿಯಿ೦ದ ಹಾಗೂ ವಿವಿಧ ಪಾಳಿಯ ಉಸ್ತುವಾರಿಯಲ್ಲಿ ಭಜನಾ ಕಾರ್ಯಕ್ರಮವು ನಡೆಯಿತು. ಪ್ರಥಮ ದಿನವಾದ ಇ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಮತ್ಸ್ಯ”ಅಲ೦ಕಾರವನ್ನು ಮಾಡಲಾಯಿತು.

 

Comments
  • Very nice photos

    February 19, 2021

Leave A Comment