Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಕಾನೂನು ಎಲ್ಲರಿಗೂ ಒಂದೇ, ದಿಶಾ ರವಿಯನ್ನು ನಿಯಮ ಪ್ರಕಾರ ಬಂಧಿಸಲಾಗಿದೆ: ದೆಹಲಿ ಪೊಲೀಸ್ ಮುಖ್ಯಸ್ಥ

ನವದೆಹಲಿ: ಕಾರ್ಯಕರ್ತೆ ದಿಶಾ ರವಿ ಬಂಧನ ಕಾನೂನು ಪ್ರಕಾರವೇ ಮಾಡಲಾಗಿದ್ದು, 22 ವರ್ಷದವರಿಗೆ ಒಂದು ಕಾನೂನು, 50 ವರ್ಷದವರಿಗೆ ಮತ್ತೊಂದು ಎಂಬುದಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, 22 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಬಂಧನ ವೇಳೆ ಕಾನೂನು ಲೋಪವಾಗಿದೆ, ನಿಯಮ ಪ್ರಕಾರ ಬಂಧಿಸಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.

ಕಳೆದ ಶನಿವಾರ ದಿಶಾ ರವಿಯನ್ನು ಬೆಂಗಳೂರಿನಲ್ಲಿ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ದಿಶಾ ರವಿ ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಗೆ ಟೆಲಿಗ್ರಾಂ ಆಪ್ ಮೂಲಕ ಟೂಲ್ ಕಿಟ್ ನ್ನು ಕಳುಹಿಸಿದ್ದು ದೇಶಕ್ಕೆ ಅಪಪ್ರಚಾರ ತರುವ ನಿಟ್ಟಿನಲ್ಲಿ ಖಲಿಸ್ತಾನ ಪರ ಇರುವ ಗುಂಪಿನ ಜೊತೆ ಸೇರಿ ಕುಕೃತ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಬಂಧನವಾಗಿದೆ.

22 ವರ್ಷದವರಿಗೊಂದು ಕಾನೂನು, 50 ವರ್ಷದವರಿಗೆ ಮತ್ತೊಂದು ಕಾನೂನು ಎಂಬುದಿಲ್ಲ, ಹೀಗಾಗಿ ದಿಶಾ ರವಿ ಬಂಧನ ಕಾನೂನು ಪ್ರಕಾರವೇ ಆಗಿದೆ, ದಿಶಾ ರವಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದರು.

ದಿಶಾ ರವಿ, ಮುಂಬೈ ವಕೀಲೆ ನಿಕಿತಾ ಜಾಕೋಬ್ ಮತ್ತು ಪುಣೆ ಎಂಜಿನಿಯರ್ ಶಂತನು ಅವರು ಟೂಲ್ ಕಿಟ್ ತಯಾರಿಸಿ ಭಾರತದ ಇಮೇಜ್ ನ್ನು ಕೆಡಿಸಲು ಇತರರೊಂದಿಗೆ ಹಂಚಿಕೊಂಡಿದ್ದಾರೆ. ನಂತರ ಡೇಟಾವನ್ನು ಅಳಿಸಲಾಗಿದೆ, ದಿಶಾ ರವಿಯ ಟೆಲಿಗ್ರಾಮ್ ಖಾತೆಯಲ್ಲಿ ಟೂಲ್ ಕಿಟ್ ಗೆ ಸಂಬಂಧಿಸಿದ ಅನೇಕ ಲಿಂಕ್ ಗಳನ್ನು ನಂತರ ಅಳಿಸಿಹಾಕಿರುವುದು ಪತ್ತೆಯಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಾರ್ಯಕರ್ತೆ ದಿಶಾ ರವಿ ಬಂಧನ ವಿರೋಧಿಸಿ ದೇಶಾದ್ಯಂತ ಒಂದು ವರ್ಗದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ #ReleaseDishaRavi ಹ್ಯಾಶ್ ಟ್ಯಾಗ್ ಟ್ರೆಂಡಿಯಾಗಿದೆ.

No Comments

Leave A Comment