Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಕೆಂಪು ಕೋಟೆ ಹಿಂಸಾಚಾರ ಪ್ರಕರಣ: ನಟ ದೀಪ್ ಸಿಧು ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ

ನವದೆಹಲಿ: ನವದೆಹಲಿಯ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪಂಜಾಬಿ ನಟ ದೀಪ್ ಸಿಧು ಬಂಧನ ಅವಧಿ ಏಳು ದಿನಗಳವರೆಗೆ ವಿಸ್ತರಣೆಯಾಗಿದೆ.

ದೆಹಲಿ ನ್ಯಾಯಾಲಯವು ನಟ ದೀಪ್ ಸಿಧು ಬಂಧನ ಅವಧಿಯನ್ನು ಏಳು ದಿನಗಳ ಕಾಲ ವಿಸ್ತರಿಸಿದೆ.

ನಟ ದೀಪ್ ಸಿಧು ರಾಷ್ಟ್ರ ರಾಜಧಾನಿಯಿಂದ 100 ಕಿ.ಮೀ ದೂರದಲ್ಲಿರುವ ಹರಿಯಾಣದ ಕರ್ನಾಲ್‌ನಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದು ಆತನ ಪತ್ತೆಗೆ ಪೋಲೀಸರು ವ್ಯಾಪಕ ಶೋಧ ನಡೆಸಿದ್ದಲ್ಲದೆ ಅವನ ಬಗ್ಗೆ ಸುಳೀವು ನೀಡಿದವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದ್ದರು.

ಜನವರಿ 26 ರ ಹಿಂಸಾಚಾರದ ತನಿಖೆಯನ್ನು ಸ್ಥಳೀಯ ಪೋಲೀಸರು, ವಿಶೇಷ ಕೋಶ ಮತ್ತು ಅಪರಾಧ ಶಾಖೆಗಳು ಮೂರು ಹಂತಗಳಲ್ಲಿ ಕೈಗೊಂಡಿದೆ.

ಜನವರಿ 26 ರಂದು, ಗಾಝಿಪುರರ ಗಡಿಯಿಂದ ಐಟಿಒ ತಲುಪಿದ ಹತ್ತಾರು ಪ್ರತಿಭಟನಾಕಾರ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ವ್ಯಾಪಕವಾಗಿ ಖಂಡಿಸಲ್ಪಟ್ಟ ಹಿಂಸಾಚಾರದಲ್ಲಿ ಪೊಲೀಸರೊಂದಿಗೆ ಘರ್ಷಣೆ ಜತೆಗೇ ಆಕ್ರೋಶಗೊಂಡ ರೈತರು ಪಾರಂಪರಿಕ ಕೆಂಪು ಕೋಟೆಗೆ ನುಗ್ಗಿ ಹತ್ತಿ ಝಳಪಿಸಿ ಸಿಖ್ಖ್ ಧ್ವಜವನ್ನು ಹಾರಿಸಿದ್ದರು.

No Comments

Leave A Comment