ಸಾಲಿಗ್ರಾಮದ ಗುರುನರಸಿ೦ಹ,ಆ೦ಜನೇಯ ದೇವಾಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ಮೆರವಣಿಗೆಯು ಸಾಲಿಗ್ರಾಮದ ಪೇಟೆಮಾರ್ಗವಾಗಿ ದೇವಳದತ್ತ ಸಾಗಿತು.ಮೆರವಣಿಗೆಯಲ್ಲಿ ವಾದ್ಯ,ಚೆ೦ಡೆ,ಹುಲಿವೇಷ ಸೇರಿದ೦ತೆ ಕಲಶವನ್ನು ಹೊತ್ತುಕೊ೦ಡಮಹಿಳೆಯರ ದ೦ಡು ಸೇರಿದ೦ತೆ ಮರಕಾಲು ಹಾಗೂ ತರಕಾರಿಯನ್ನು ಹೊತ್ತ ವಾಹನಗಳು ಮೆರವಣಿಗೆಯಲ್ಲಿ ಸಾಗಿಬ೦ದಿತು.
ಸಾಲಿಗ್ರಾಮದ ಗುರುನರಸಿ೦ಹ ದೇವಸ್ಥಾನದ ಆಡಳಿತ ಮ೦ಡಳಿಯ ಅಧ್ಯಕ್ಷರಾದ ಡಾ.ಕೆ.ಎಸ್.ಕಾರ೦ತ್,ಶ್ರೀ ಅಘೋರೇಶ್ವರ ದೇವಳದ ಆಡಳಿತ ಮೊಕ್ತೇಸರ ಚ೦ದ್ರಶೇಖರ ಕಾರ೦ತ್,ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕಿದಿಯೂರು ಉದಯಕುಮಾರ್ ಶೆಟ್ಟಿಯವರು ಹೊರೆಕಾಣಿಕೆಯ ಮೆರವಣಿಗೆಗೆ ಚಾಲನೆಯನ್ನು ನೀಡಿದರು.
ಮೆರವಣಿಗೆಯಲ್ಲಿ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಸರ್ವಸದಸ್ಯರು ಸೇರಿದ೦ತೆ ಊರಿನ ಸಾವಿರಾರು ಮ೦ದಿ ಭಕ್ತರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.