Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಸೂರಿ ‘ಬ್ಯಾಡ್ ಮ್ಯಾನರ್ಸ್’ನಲ್ಲಿ ಅಭಿಷೇಕ್ ಅಂಬರೀಷ್ ಜೊತೆ ಡಿಂಪಲ್ ಕ್ವೀನ್ ರೋಮ್ಯಾನ್ಸ್!

ನಿರ್ದೇಶಕ ಸೂರಿ ಹಾಗೂ ಅಭಿಷೇಕ್‌ ಅಂಬರೀಶ್‌ ಕಾಂಬಿನೇಷನ್‌ನ ‘ಬ್ಯಾಡ್ ‌ಮ್ಯಾನರ್ಸ್‌’ ಚಿತ್ರಕ್ಕೆ ಇಬ್ಬರು ನಾಯಕಿಯರು ಆಯ್ಕೆಯಾಗಿದ್ದಾರೆ. ರಚಿತಾ ರಾಮ್ ಮತ್ತು ಪ್ರಿಯಾಂಕ ಕುಮಾರ್ ನಾಯಕಿಯಾಗಿದ್ದಾರೆ.

ಪ್ರಿಯಾಂಕ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಅವರು ತಮಿಳು ಧಾರಾವಾಹಿಯಲ್ಲಿ ನಟಿಸಿ, ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಮೈಸೂರು ಮೂಲದ ಈಕೆಗೆ ‘ಬ್ಯಾಡ್‌ಮ್ಯಾನರ್ಸ್‌’ ಮೊದಲ ಸಿನಿಮಾ. ಅವರ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ರಚಿತಾ ರಾಮ್ ಈಗ ಅಭಿಷೇಕ್‌ಗೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗುತ್ತಿದ್ದಾರೆ. ಇಬ್ಬರು ನಾಯಕಿಯರು ಚಿತ್ರತಂಡಕ್ಕೆ ಜತೆಯಾದ ಮೇಲೆ ಚಿತ್ರೀಕರಣಕ್ಕೆ ಮತ್ತಷ್ಟುಜೋಶ್‌ ಬಂದಿದೆಯಂತೆ. ನಟಿ ತಾರಾ, ಶರತ್‌ ಲೋಹಿತಾಶ್ವ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚರಣ್‌ ರಾಜ್‌ ಸಂಗೀತ ನೀಡುತ್ತಿದ್ದು, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಶೇಖರ್‌ ಛಾಯಾಗ್ರಾಹಣ ಮಾಡುತ್ತಿದ್ದಾರೆ.

ಈಗಾಗಲೇ ಮಂಡ್ಯದಲ್ಲಿ ಚಿತ್ರೀಕರಣ ಆರಂಭವಾಗಿದೆ. ಚಿತ್ರದ ಫಸ್ಟ್‌ ಲುಕ್‌ನಿಂದಲೇ ಗಮನ ಸೆಳೆದ ಚಿತ್ರ ಇದಾಗಿದೆ. ಸುಧೀರ್‌ ಕೆಎಂ ಬ್ಯಾಡರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ವರ್ಷ ಅಂಬರೀಷ್ ಹುಟ್ಟುಹಬ್ಬದಂದು ಸಿನಿಮಾ ಲಾಂಚ್ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ನಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭವಾಗಿದ್ದು, ಭರದಿಂದ ಸಾಗಿದೆ.

No Comments

Leave A Comment