Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಬೆಂಗಳೂರಿನಿಂದ 23 ಗಂಟೆ ರಸ್ತೆ ಪ್ರಯಾಣ ಮಾಡಿ ಚೆನ್ನೈ ತಲುಪಿದ ಶಶಿಕಲಾ: ‘ಚಿನ್ನಮ್ಮ’ಗೆ ಅಭಿಮಾನಿಗಳ ಅದ್ದೂರಿ ಸ್ವಾಗತ

ಚೆನ್ನೈ: ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಇತ್ತೀಚೆಗೆ ಬಿಡುಗಡೆಯಾದ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿ ಕೆ ಶಶಿಕಲಾ ಮಂಗಳವಾರ ಚೆನೈಗೆ ಬಂದಿಳಿದಿದ್ದಾರೆ. ಕೋವಿಡ್-19 ಸಾಂಕ್ರಾಮಿಕಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡು 23 ಗಂಟೆಗಳ ಬಳಿಕ ಚೆನ್ನೈಗೆ ಇಂದು ಬೆಳಗ್ಗೆ ಬಂದು ತಲುಪಿದ್ದಾರೆ.

ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಕಟವರ್ತಿಯಾಗಿ ತಮಿಳು ನಾಡು ರಾಜಕೀಯದಲ್ಲಿ ಗುರುತಿಸಿಕೊಂಡಿರುವ 65 ವರ್ಷದ ಶಶಿಕಲಾ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಚೆನ್ನೈಯ ಟಿ ನಗರಕ್ಕೆ ಬಂದು ತಲುಪಿದರು.

ನಿನ್ನೆ ಬೆಳಗ್ಗೆ ಬೆಂಗಳೂರು ಹೊರಟಿದ್ದ ಶಶಿಕಲಾ ಅವರಿಗೆ ಕಾರಿನಲ್ಲಿ ಪ್ರಯಾಣ ಮಾಡುವಾಗ ದಾರಿಯುದ್ದಕ್ಕೂ ಅಭೂತಪೂರ್ವ ಸ್ವಾಗತ ಸಿಕ್ಕಿತು. ಅಭಿಮಾನಿಗಳ ಹರ್ಷೋದ್ಘಾರ, ಪುಷ್ಪಗಳ ಸುರಿಮಳೆ, ಅದ್ದೂರಿ ಸ್ವಾಗತ ಮಧ್ಯೆ ಶಶಿಕಲಾ ತಮ್ಮ ತವರಿಗೆ ಇಂದು ಬೆಳಗ್ಗೆ ತಲುಪಿದರು.

ಎಂಜಿಆರ್ ಪ್ರತಿಮೆಗೆ ಗೌರವ ಸಲ್ಲಿಕೆ:ಶಶಿಕಲಾ ಅವರು ಇಂದು ಬೆಳಗ್ಗೆ ತಮ್ಮ ನಿವಾಸಕ್ಕೆ ತೆರಳುವ ಮುನ್ನ ಎಐಎಡಿಎಂಕೆ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್ ಅವರ ರಾಮಪುರಂನಲ್ಲಿರುವ ನಿವಾಸಕ್ಕೆ ತೆರಳಿ ಅವರ ಮೂರ್ತಿಗೆ ಗೌರವ ನಮನ ಸಲ್ಲಿಸಿದರು. ನಂತರ ಎಂಜಿಆರ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

ಅವರ ಜೊತೆ ಅವರ ಅಳಿಯ ಮತ್ತು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ನಾಯಕ ಟಿಟಿವಿ ದಿನಕರನ್ ಉಪಸ್ಥಿತರಿದ್ದರು.

ಜೈಲು ಸೇರಿದ್ದೇಕೆ: ತಮಿಳು ನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನ ನಂತರ ಶಶಿಕಲಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಗರಿಗೆದರಿತು. 66.65 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಸಾಬೀತಾಗಿ ಶಿಕ್ಷೆಯೂ ಪ್ರಕಟವಾಗಿ 2017ರ ಫೆಬ್ರವರಿಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೇರಿದರು. ನಾಲ್ಕು ವರ್ಷಗಳ ಶಿಕ್ಷೆ ಬಳಿಕ ಕೋರ್ಟ್ ಗೆ ಕೋಟಿಗಟ್ಟಲೆ ದಂಡ ಪಾವತಿಸಿ ಕಳೆದ ಜನವರಿ 27ರಂದು ಬಂಧಮುಕ್ತರಾದರು.

ಅಷ್ಟು ಹೊತ್ತಿಗೆ ಕೋವಿಡ್-19 ಪಾಸಿಟಿವ್ ಬಂದು ವಿಕ್ಟೋರಿಯಾ ಆಸ್ಪತ್ರೆ ಸೇರಿದರು. ಜನವರಿ 31ಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬೆಂಗಳೂರಿನಿಂದ 35 ಕಿಲೋ ಮೀಟರ್ ದೂರದಲ್ಲಿರುವ ರೆಸಾರ್ಟ್ ನಲ್ಲಿ ಉಳಿದುಕೊಂಡರು. ನಿನ್ನೆ ದಿನಕರನ್ ಜೊತೆ ರೆಸಾರ್ಟ್ ನಿಂದ ಚೆನ್ನೈ ಕಡೆ ಹೊರಟರು.

No Comments

Leave A Comment