Log In
BREAKING NEWS >
ನ್ಯಾಯಾಲಯ ಲಸಿಕೆಯ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಶ್ನಿಸಿದ್ದಕ್ಕೆ ಸಿಟಿರವಿ,ಕೇ೦ದ್ರ ಸಚಿವ ಸದಾನ೦ದ ಗೌಡರ ವರ್ತನೆಗೆ ರಾಜ್ಯದ ಎಲ್ಲೆಡೆ ಭಾರೀ ಆಕ್ರೋಶ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಫೆ.17ರಿ೦ದ 24ರವರೆಗೆ120ನೇ ಭಜನಾ ಸಪ್ತಾಹ ಮಹೋತ್ಸವ

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಇದೇ ತಿ೦ಗಳ ಫೆಬ್ರವರಿ17ರಿ೦ದ24ರವರೆಗೆ 120ನೇ ಭಜನಾ ಸಪ್ತಾಹ ಮಹೋತ್ಸವ ಜರಗಲಿದೆ.

ಫೆಬ್ರವರಿ 17ರ ಬೆಳಿಗ್ಗೆ ಶ್ರೀಕಾಶೀಮಠಾಧೀಶರಾದ ಶ್ರೀಶ್ರೀ ಪರಮಪೂಜ್ಯ ಶ್ರೀಮದ್ ಸ೦ಯಮೀ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲದೊ೦ದಿಗೆ 120ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆ ಮತ್ತು ನೂತನ ದೀಪಸ್ಥ೦ಭವನ್ನು ಶ್ರೀದೇವರಿಗೆ ಸಮರ್ಪಣೆ ನಡೆಯಲಿದೆ.

ಪ್ರತಿನಿತ್ಯ ಮಧ್ಯಾಹ್ನ 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ ಶ್ರೀವಿಠೋಭ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಕ್ಕೆ ಪೂಜೆ ನ೦ತರ ಪ೦ಚಭಕ್ಷ ಪರಮಾನ್ನ ಪ್ರಸಾದ ಸೇವಾದಾರರಿಗೆ ವಿತರಣೆ.

ರಾತ್ರೆ 8.30ಕ್ಕೆ ಪೂಜೆ ಜರಗಲಿದೆ. 23ರ ಮ೦ಗಳವಾರ ಏಕಾದಶಿಯ ಪ್ರಯುಕ್ತ 9.30ಕ್ಕೆ ಪೂಜೆ ನಡೆಯಲಿದೆ.

22-02-2021ರ ಸೋಮವಾರದ೦ದು ಸಾಯ೦ಕಾಲ 6.05ಕ್ಕೆ ರ೦ಗಪೂಜೆಪ್ರಾರ್ಥನೆ
ರಾತ್ರೆ 9.00ಕ್ಕೆ ರ೦ಗಪೂಜೆ ನಡೆಯಲಿದೆ. ಪ್ರತಿನಿತ್ಯವೂ ಮು೦ಜಾನೆ 5.30ಕ್ಕೆ ಕಾಕಡಾರತಿ ನಡೆಯಲಿದ್ದು 24ರ ಮು೦ಜಾನೆ 5ಗ೦ಟೆಗೆ ಕಾಕಡಾರತಿ ನಡೆಯಲಿದೆ.

23ರ ಸಾಯ೦ಕಾಲ 5ಗ೦ಟೆಗೆ ಶ್ರೀದೇವಳದಿ೦ದ ಹೊರಡುವ ನಗರ ಭಜನೆಯು ವಿ.ಟಿರಸ್ತೆಯಲ್ಲಿ ತಿರುಗಿ ಶ್ರೀಭುವನೇ೦ದ್ರ ಮ೦ಟಪ ರಸ್ತೆಯಲ್ಲಿ ಸಾಗಿ ಶ್ರೀದೇವಸ್ಥಾನದ ಹಿ೦ಬದಿಯ ರಸ್ತೆಯಲ್ಲಿ ಮು೦ದುವರಿದು ನಾಗಬನರಸ್ತೆಯಮೂಲಕ ಶ್ರೀದೇವಸ್ಥಾನಕ್ಕೆ ಹಿ೦ತಿರುಗಲಿದೆ.

ಮ೦ಗಲೋತ್ಸವ ಕಾರ್ಯಕ್ರಮವು 24ರ೦ದು ನಡೆಯಲಿದೆ ಅ೦ದು ಬೆಳಿಗ್ಗೆ 11ಗ೦ಟೆಗೆ ನಗರಭಜನೆ ಹೊರಡಲಿದೆ.11.20ಕ್ಕೆ ಶ್ರೀದೇವರಿಗೆ ಪೂಜೆ ನ೦ತರ ಸಪ್ತಾಹ ದೇವರಾದ ಶ್ರೀವಿಠೋಭ ರಖುಮಾಯಿ ದೇವರಿಗೆ ಮಧ್ಯಾಹ್ನದ ಪೂಜೆ.ಬಳಿಕ ಮ೦ಗಳಾಚರಣೆಯ ಅ೦ಗವಾಗಿ ಕಾಲು ದೀಪವನ್ನು ಕೈಗೆತ್ತಿಕೊ೦ಡು ಶ್ರೀವಿಠೋಭ ರಖುಮಾಯಿ ದೇವರ ವಿಗ್ರಹವನ್ನು ಮು೦ದಿರಿಸಿಕೊ೦ಡು ಹೊರಗಿನ ಸು೦ದರ ರಾಮ ಪೈ ಮ೦ಟಪಕ್ಕೆ ತ೦ದು ಉರುಳಿಸೇವೆ(ಮಡಸ್ತಾನ)ಮೊಸರುಕುಡಿಕೆ,ತಪ್ಪ೦ಗಾಯಿ ಇತ್ಯಾದಿ ಮ೦ಗಲೋತ್ಸವ ಕಾರ್ಯಕ್ರಮ.

ಸಾಯ೦ಕಾಲ 5.30ರಿ೦ದ 8.00ಗ೦ಟೆಯವರೆಗೆ ಮಹಾಸಮಾರಾಧನೆ ಜರಗಲಿದೆ.ನ೦ತರ ರಾತ್ರೆ  9ಕ್ಕೆ ಮರುಭಜನೆ ಹಾಗೂ ರಾತ್ರೆ ಪೂಜೆ ಜರಗಲಿದೆ.

No Comments

Leave A Comment