Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಉಡುಪಿ: 11ರ ಬಾಲಕಿ ತನುಶ್ರೀಯಿಂದ ‘ಬ್ಯಾಕ್ ವರ್ಡ್ ಬಾಡಿ ಸ್ಕಿಪ್’ನಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ದಾಖಲೆ!

ಉಡುಪಿ: ‘ಒಂದು ನಿಮಿಷದಲ್ಲಿ ಹೆಚ್ಚು ‘ಬ್ಯಾಕ್ ವರ್ಡ್ ಬಾಡಿ ಸ್ಕಿಪ್’ ನಲ್ಲಿ ಉಡುಪಿಯ 11 ವರ್ಷದ ಬಾಲಕಿ ತನುಶ್ರೀ ಪಿತ್ರೋಡಿ ಹೊಸ ವಿಶ್ವ ದಾಖಲೆಯನ್ನು ರಚಿಸಿದ್ದಾರೆ. ಶನಿವಾರ ಇಲ್ಲಿನ ಬ್ರಹ್ಮಗಿರಿಯಲ್ಲಿರುವ ಸೇಂಟ್ ಸಿಸಿಲಿಯ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ. ತನುಶ್ರೀ ಒಂದು ನಿಮಿಷದಲ್ಲಿ 55 ಬ್ಯಾಕ್ ವರ್ಡ್ ಬಾಡಿ ಸ್ಕಿಪ್ ಮಾಡಿದ್ದಾರೆ.

ಉದಯ್ ಕುಮಾರ್ ಮತ್ತು ಸಂಧ್ಯಾ ಅವರ ಪುತ್ರಿಯಾದ ತನುಶ್ರೀ ಉಡುಪಿಯ ಸೇಂಟ್ ಸಿಸಿಲಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮುಖ್ಯಸ್ಥ ಮನೀಶ್ ಬಿಶ್ನೋಯ್ ಈ ದಾಖಲೆಯನ್ನು ಪ್ರಕಟಿಸಿದ್ದು ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ತನುಶ್ರೀ ಅವರಿಗೆ ಹಸ್ತಾಂತರಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮನೀಶ್ ಬಿಶ್ನೋಯ್  “ತನಿಶ್ರೀ ದೇವರ ಆಶೀರ್ವಾದವನ್ನು ಹೊಂದಿರುವ ಬಾಲಕಿ, ಯೋಗದಲ್ಲಿ ಅಸಾಧಾರಣವಾದ ಸಾಧನೆ ಮಾಡಿದವಳು.ಅವಳ ಮೂಳೆಗಳು ಮೃದುವಾಗಿದ್ದು . ಇದು ನಿಜವಾಗಿಯೂ ಅದ್ಭುತ ಮತ್ತು ಅಸಾಧಾರಣ ದಾಖಲೆಯಾಗಿದೆ. ಅವರು ಈಗಾಗಲೇ ಐದು ದಾಖಲೆಗಳನ್ನು ರಚಿಸಿದ್ದಾರೆ. ಇದು ಅವರು ಮಾಡಿದ ಆರನೇ ದಾಖಲೆ. ಗೌರವಾನ್ವಿತ ಸಂಸ್ಥೆಯ ಪರೀಕ್ಷೆಯ ನಂತರ  ಅಂತಿಮ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಹಿಂದೆ ದುಬೈನ ವ್ಯಕ್ತಿಯೊಬ್ಬರು ಫಾರ್ವರ್ಡ್ ಬಾಡಿ ಸ್ಕಿಪ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ತನಶ್ರೀ ತಾನು ಚಿನ್ನದ ಹುಡುಗಿ ಎಂದು ಸ್ವತಃ ಸಾಬೀತುಪಡಿಸಿದ್ದಾಳೆ. ಇದು ಅವಳ ಬದುಕಿನ ಅತ್ಯಂತ ಸುಂದರ ಕ್ಷಣ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಅವರು ಒಂದೊಂದಾಗಿ ದಾಖಲೆಗಳನ್ನು ರಚಿಸುತ್ತಿದ್ದಾರೆ. ” ಎಂದರು.

“ನನ್ನ ಮೊದಲ ಪ್ರಯತ್ನದಲ್ಲಿ ನಾನು ಗುರಿ ತಲುಪಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮನೆಯಲ್ಲಿ ಲಾಕ್‌ಡೌನ್ ಅವಧಿಯಲ್ಲಿ ನಾನು ಇದನ್ನು ಅಭ್ಯಾಸ ಮಾಡಿದ್ದೆ.ನಾನು ಇಟಲಿಗೆ ಹೋಗಿದ್ದಾಗ, ತಮಿಳುನಾಡಿನ ಒಬ್ಬ ವ್ಯಕ್ತಿಯು ಒಂದು ನಿಮಿಷದಲ್ಲಿ 48 ಬಾರಿ ಬ್ಯಾಕ್ ವರ್ಡ್ ಬಾಡಿ ಸ್ಕಿಪ್ ಮಾಡಿದ್ದನ್ನು ನೋಡಿದ್ದೆ. ಇದು ಗಿನ್ನೆಸ್ ದಾಖಲೆಯಾಗಿದೆ. ನಾನು ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ನಾನು ಮನೆಯಲ್ಲಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿ, ನಾನು 20 ಬಾರಿ ಮಾಡಿದ್ದೇನೆ. ನಂತರ, ನಾನು ಸತತ ಅಭ್ಯಾಸದಿಂದ ಇದನ್ನು ಉತ್ತಮಪಡಿಸಿಕೊಂಡೆ. ನಾನು 46 ಕ್ಕೆ ತಲುಪಿದಾಗ, ದಾಖಲೆ ಪುಸ್ತಕಕ್ಕೆ ಸೇರಲು ನಾನು ನಿರ್ಧರಿಸಿದೆ. ಆದರೆ ನನ್ನ ವಯಸ್ಸು, ನನಗೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಪ್ರವೇಶಿಸಲು ಅನುವು ಮಾಡಿಕೊಡಲಿಲ್ಲ.ನಂತರ, ನಾನು ಗೋಲ್ಡನ್ ಬುಕ್ ಅನ್ನು ಆರಿಸಿಕೊಂಡೆ. . ನನ್ನ ಪೋಷಕರಿಗೆ ಮತ್ತು ನನ್ನ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ” ತನುಶ್ರೀ ಹೇಳಿದ್ದಾರೆ.

“ನನ್ನ ಮಗಳು ತನುಶ್ರೀ ತನ್ನ ಅಭ್ಯಾಸಕ್ಕಿಂತಲೂ ಉತ್ತಮವಾಗಿ ಸಾಧನೆ ಮಾಡಿದ್ದಾಳೆ. ಅವಳ ದಾಖಲೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಸಾಧಿಸುವುದು ಅಷ್ಟು ಸುಲಭವಲ್ಲ. ಅವಳ ಮುಂದಿನ ಗುರಿ ಕಡಿಮೆ ಅವಧಿಯಲ್ಲಿ ಯೋಗದ ಹೆಚ್ಚಿನ ಭಂಗಿಗಳನ್ನು ಪ್ರಸ್ತುತಪಡಿಸುವುದು. ಶೀಘ್ರದಲ್ಲೇ ಅದನ್ನು ಮಾಲು ಅವಳಿಗೆ ಸಾಧ್ಯವಾಗಲಿ ಎಂದು ನಾನು ಆಶಿಸುತ್ತೇನೆ.”  ತನುಶ್ರೀ ಅವರ ತಂದೆ ತಂದೆ ಉದಯ್ ಕುಮಾರ್ ಹೇಳಿದ್ದಾರೆ.

ಬದಗುಬೆಟ್ಟು ಡಿಟ್ ಕೋಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿಮೀನು ಮಾರುಕಟ್ಟೆ ಒಕ್ಕೂಟದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕೌನ್ಸಿಲರ್, ಎಸ್.ವಿ.ಭಾ, ಸೇಂಟ್ ಸೆಸಿಲಿಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ, ರಾಮಕೃಷ್ಣ ಕೊಡಂಚ, ಯೋಗ ಶಿಕ್ಷಕ, ವಿಶು ಶೆಟ್ಟಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

No Comments

Leave A Comment