ತೆಲುಗು ನಟ ಶ್ರೀವಾತ್ಸವ್ ಚಂದ್ರಶೇಖರ್ ನಿಗೂಢ ಸಾವು, ಆತ್ಮಹತ್ಯೆ ಶಂಕೆ ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟ ಧುನುಷ್ ಜೊತೆ ಸಹನಟನಾಗಿ ಅಭಿನಯಿಸಿದ್ದ ತೆಲುಗು ನಟ ಶ್ರೀವಾತ್ಸವ್ ಚಂದ್ರಶೇಖರ್ ನಿಗೂಢವಾಗಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗುತ್ತಿದೆ. ಶ್ರೀವಾತ್ಸವ್ ಚಂದ್ರಶೇಖರ್ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದು, ಶುಕ್ರವಾರ ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ನಟ ಶ್ರೀವಾತ್ಸವ್ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಶ್ರೀವಾತ್ಸವ್ ಚಂದ್ರಶೇಖರ್ 2019ನೇ ವರ್ಷದಲ್ಲಿ ತಮಿಳು ಸೂಪರ್ ಸ್ಟಾರ್ ಧನುಷ್ ಜೊತೆಗೆ ತೆರೆ ಹಂಚಿಕೊಂಡಿದ್ದರು. ತಮಿಳಿನ ‘ಎನೈ ನೋಕಿ ಪಾಯೂಮ್ ಥೋಟಾ’ ಚಿತ್ರದಲ್ಲಿ ನಟಿಸಿದ್ದರು. ಇದಲ್ಲದೆ ‘ವಲ್ಲಮಯ್ ತರುವಾಯೊ’ ವೆಬ್ ಸಿರೀಸ್ನಲ್ಲೂ ಗುರುತಿಸಿಕೊಂಡಿದ್ದರು ವರದಿಯಲ್ಲಿರುವಂತೆ ನಟ ಶ್ರೀವಾತ್ಸವ್ ಚಂದ್ರಶೇಖರ್ ತಮ್ಮ ತಂದೆ ಹೊಂದಿರುವ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಶ್ರೀವಾತ್ಸವ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. Share this:TweetWhatsAppEmailPrintTelegram