ಆಸ್ಟ್ರೇಲಿಯಾ ಮಾಜಿ ಟೆಸ್ಟ್ ಕ್ರಿಕೆಟಿಗ ಸ್ಯಾಮ್ ಗ್ಯಾನನ್ ನಿಧನ
ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಸ್ಯಾಮ್ ಗ್ಯಾನನ್ ನಿಧನರಾಗಿದ್ದು ಅವರಿಗೆ 73 ವರ್ಷ ವಯಸ್ಸಾಗಿತ್ತು.
ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ಆಸ್ಚ್ರೇಲಿಯಾ ಮೊದಲ ಬಾರಿಗೆ ಪಾಲ್ಗೊಂಡಾಗ ಸ್ಯಾಮ್ ಗ್ಯಾನನ್ ಮೂರು ಪಂದ್ಯಗಳಲ್ಲಿ ಆಸಿಸ್ ತಂಡವನ್ನು ಪ್ರತಿನಿಧಿಸಿದ್ದರು. 1977ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಗ್ಯಾನನ್ ಪದಾರ್ಪಣೆ ಮಾಡಿದ್ದರು. ಪದಾರ್ಪಣೆ ಪಂದ್ಯದಲ್ಲೇ ಗ್ಯಾನನ್ 7 ವಿಕೆಟ್ ಪಡೆದು ಮಿಚಿದ್ದರು. ಎಡಗೈ ವೇಗಿಯಾಗಿದ್ದ ಸ್ಯಾಮ್ ಗ್ಯಾನನ್ 40 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 117 ವಿಕೆಟ್ ಗಳನ್ನು ಪಡೆದಿದ್ದಾರೆ. 1978-79ರಲ್ಲಿ ಗ್ಯಾನನ್ ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿಯಾಗಿದ್ದರು.
ನಿವೃತ್ತಿ ಬಳಿಕ, ಗ್ಯಾನನ್ ಒಂದು ದಶಕಕ್ಕೂ ಹೆಚ್ಚು ಕಾಲ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಶನ್ನ ಉಪಾಧ್ಯಕ್ಷ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2017ರಲ್ಲಿ ಗ್ಯಾನನ್ ಕ್ರಿಕೆಟ್ ಆಸ್ಟ್ರೇಲಿಯಾ ನೀಡುವ ಸರ್ವೋನ್ನತ ಪುರಸ್ಕಾರ ‘ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ’ಗೆ ಭಾಜನರಾಗಿದ್ದರು.
ಸ್ಯಾಮ್ ಗಾನನ್ ನಿಧನಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ವಲಯದ ಗಣ್ಯರು ಕಂಬನಿ ಮಿಡಿದಿದ್ದಾರೆ.