Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಬೆಂಗಳೂರು: ಕಾಂಕ್ರಿಟ್ ಮಿಕ್ಸರ್ ಗೆ ಕಾರು ಢಿಕ್ಕಿ ಮೂವರ ಸಾವು

ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದು ‌ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಿನ್ನೆ ಮಧ್ಯ ರಾತ್ರಿ ಬಾಗಲೂರು-ಕಣ್ಣೂರು ರಸ್ತೆಯಲ್ಲಿ ನಡೆದಿದೆ.

ಕಾರಿನಲ್ಲಿದ್ದ ಬಾಗಲೂರಿನ ಶಿವು (26), ಮಿಲನ್(25) ಹಾಗೂ ಸಾತನೂರಿನ ಮಧು(26) ಮೃತ ವ್ಯಕ್ತಿಗಳು. ಅಪಘಾತದಲ್ಲಿ ಗಾಯಗೊಂಡ ಅನೂಷಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಮಧು ಅವರ ಸಂಬಂಧಿಯಾಗಿದ್ದ ಅನುಷಾ ಅವರನ್ನು ವಿದ್ಯಾರಣ್ಯಪುರದ ಮನೆಗೆ ಬಿಡಲು ಮಧ್ಯರಾತ್ರಿ 12.30ರ ವೇಳೆ ವೋಕ್ಸ್ ವ್ಯಾಗನ್ ಕಾರಿನಲ್ಲಿ ನಾಲ್ವರು ಕಣ್ಣೂರಿನಿಂದ ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಬಾಗಲೂರು-ಕಣ್ಣೂರು ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿಯನ್ನು ಹಿಂದಿಕ್ಕಲು ಹೋಗಿ ಈ ಅವಘಡ ಸಂಭವಿಸಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸಜಿತ್ ತಿಳಿಸಿದ್ದಾರೆ.

ಕಾರಿನಲ್ಲಿದ್ದ ಬಾಗಲೂರಿನ ಶಿವು (26), ಮಿಲನ್(25) ಹಾಗೂ ಸಾತನೂರಿನ ಮಧು(26) ಮೃತ ದುರ್ದೈವಿಗಳಾಗಿದ್ದಾರೆ. ಅನೂಷಾ ಎಂಬುವವರಿಗೆ ಗಂಭೀರ‌ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂಚಾರಿ ಡಿಸಿಪಿ ಸಜಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

No Comments

Leave A Comment