Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ರೈತರ ಬೇಡಿಕೆಗೆ ಬಗ್ಗದ ಸರ್ಕಾರ: ದೆಹಲಿ ಗಡಿಯಲ್ಲಿ ಅಂತರ್ಜಾಲ ಸ್ಥಗಿತ ಮತ್ತೆ ಎರಡು ದಿನ ವಿಸ್ತರಣೆ

ನವದೆಹಲಿ: ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಬಗ್ಗದೇ ದೆಹಲಿ ಗಡಿಯಲ್ಲಿ ಅಂತರ್ಜಾಲ ಸ್ಥಗಿತ ಮತ್ತೆ ಎರಡು ದಿನ ವಿಸ್ತರಣೆ ಮಾಡಿದೆ.

ರೈತರನ್ನು ಪ್ರತಿಭಟನಾ ನಿರತ ಸ್ಥಳದಿಂದ ತೆರವುಗೊಳಿಸಲು ಸರ್ಕಾರ ಮುಂದಾಗಿದ್ದು, ಪ್ರತಿಭಟನಾ ನಿರತರು ಇರುವ ಸ್ಥಳದಲ್ಲಿ ನೀರು ಹಾಗೂ ಅಂತರ್ಜಾಲ ಸೌಲಭ್ಯವನ್ನು ಸ್ಥಗಿತಗೊಳಿಸಿತ್ತು.

ಈ ಬೆನ್ನಲ್ಲೇ ರೈತರೂ ಸಹ ಕೇಂದ್ರ ಸರ್ಕಾರಕ್ಕೆ ಅಂತರ್ಜಾಲ ಸೌಲಭ್ಯವನ್ನು ಮರು ಸ್ಥಾಪಿಸುವಂತೆ ಆಗ್ರಹಿಸಿದ್ದರು. ಮರುಸ್ಥಾಪನೆ ಮಾಡದೇ ಇದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದರು.

ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಜ.31 ರ ಬೆಳಿಗ್ಗೆ 11 ಗಂಟೆ ವರೆಗೆ ಅಂತರ್ಜಾಲ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸಿಂಘು-ಘಾಜಿಪುರ್, ಟಿಕ್ರಿ ಗಡಿ ಭಾಗಗಳು ಹಾಗೂ ಹತ್ತಿರದ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇ ಬಳಿಯಲ್ಲಿ ನೂರಾರು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಪಡೆದಿದು ಘಾಜಿಪುರ್ ಗಡಿಯಲ್ಲಿ ಸೇರಿದ್ದಾರೆ.

ಕೆಂಪು ಕೋಟೆಯಲ್ಲಿ ಸಿಖ್ ಧರ್ಮದ ಧ್ವಜಾರೋಹಣ ಮಾಡಿ, ಗಲಭೆ ಉಂಟಾದ ಬಳಿಕ ಗುರುವಾರದವರೆಗೆ ರೈತರ ಪ್ರತಿಭಟನೆ ಕಡಿಮೆಯಾದಂತಿತ್ತು. ಸಾರ್ವಜನಿಕ ಭದ್ರತೆ ಹಾಗೂ ತುರ್ತು ಸಂದರ್ಭದ ಕಾನೂನಿನ ಅಡಿಯಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment