Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ರೈಲ್ವೇ ಇ-ಟಿಕೆಟ್’ಗಳ ಅಕ್ರಮ ಮಾರಾಟ: 10 ಮಂದಿ ಬಂಧನ, ರೂ.7.70 ಲಕ್ಷ ಮೌಲ್ಯದ ಟಿಕೆಟ್ ವಶ

ಬೆಂಗಳೂರು: ವೈಯಕ್ತಿಕ ಬಳಕೆಯ ‘ಐಆರ್‌ಸಿಟಿಸಿ’ ಖಾತೆಗಳ ಮೂಲಕ ಅಕ್ರಮವಾಗಿ ತತ್ಕಾಲ್‌ ಸೇರಿದಂತೆ ಇನ್ನಿತರ ರೈಲ್ವೆ ಇ-ಟಿಕೆಟ್‌ಗಳನ್ನು ಬುಕ್‌ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಟ್ರಾವೆಲ್ಸ್‌ ಕಚೇರಿಗಳ ಮೇಲೆ ರೈಲ್ವೆ ಭದ್ರತಾ ದಳ (ಆರ್‌ಪಿಎಫ್‌) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಅಧಿಕಾರಿಗಳು 10 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ರೂ.7.70 ಲಕ್ಷ ಮೌಲ್ಯದ  ಟಿಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಕೆಂಗೇರಿ, ಚಿಕ್ಕಪೇಟೆ, ಮಾಗಡಿ ರಸ್ತೆ, ತಾವರೆಕೆರೆ, ರಾಮನಗರ, ರಾಮಮೂರ್ತಿನಗರ ಸೇರಿದಂತೆ ಹತ್ತು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.

ದಾಳಿ ವೇಳೆ ಟಿಕೆಟ್‌ ಬುಕ್ಕಿಂಗ್‌ಗೆ ಬಳಸಲಾಗುತ್ತಿದ್ದ ವೈಯಕ್ತಿಕ ಬಳಕೆಯ 27 ಐಆರ್‌ಸಿಟಿಸಿ ಖಾತೆಗಳನ್ನು ಪತ್ತೆ ಮಾಡಲಾಗಿದ್ದು, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡು ಕ್ರಿಮಿನಲ್‌ ಕೇಸ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಲಸಿಗರು, ಕಾರ್ಮಿಕರು, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ಅಕ್ರಮ ಟಿಕೆಟ್‌ಗಳ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಇತ್ತು. ಅದರ ಜತೆಗೆ ವೈಯಕ್ತಿಕ ಬಳಕೆಯ ಖಾತೆಗಳನ್ನು ಬಳಸಿಕೊಂಡು ವಾಣಿಜ್ಯ ಬಳಕೆಯಂತೆ ಟಿಕೆಟ್‌ ಬುಕ್ಕಿಂಗ್‌ ಮಾಡುತ್ತಿರುವ ಕುರಿತು ಆರ್’ಪಿಎಫ್ ಸೈಬರ್ ಸೆಲ್ ವಿಭಾಗಕ್ಕೆ ಮಾಹಿತಿ ಬಂದಿದೆ.

ಇದರಂತೆ ಅಧಿಕಾರಿಗಳನ್ನೊಳಗೊಂಡ 6 ತಂಡಗಳನ್ನು ರಚನೆ ಮಾಡಿ ದಾಳಿ ನಡೆಸಲಾಗಿದೆ. ಮೂರು ತಂಡಗಳನ್ನು ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿಯಲ್ಲಿಯೇ ರಚನೆ ಮಾಡಲಾಗಿತ್ತು. ದಾಳಿ ವೇಳೆ ಟಿಕೆಟ್‌ ಬುಕ್ಕಿಂಗ್‌ಗೆ ಬಳಸುತ್ತಿದ್ದ ವೈಯಕ್ತಿಕ ಬಳಕೆಯ 27 ಐಆರ್‌ಸಿಟಿಸಿ ಖಾತೆಗಳನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

No Comments

Leave A Comment