Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಸೌರವ್ ಗಂಗೂಲಿ ಹೃದಯದಲ್ಲಿ 3 ಬ್ಲಾಕೇಜ್, ವರದಿ ನಂತರ ಮತ್ತೊಂದು ಸ್ಟೆಂಟ್ ಅಳವಡಿಸುವ ನಿರ್ಧಾರ: ವೈದ್ಯರು

ಕೋಲ್ಕತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು, ವರದಿ ನಂತರ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

ಮಾಜಿ ಟೀಮ್ ಇಂಡಿಯಾ ನಾಯಕ, ಇದೇ ತಿಂಗಳಲ್ಲಿ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಗ್ರಫಿಗೆ ಒಳಗಾಗುವ ಸಾಧ್ಯತೆಯಿದೆ. ಇನ್ನು ಪರೀಕ್ಷಾ ವರದಿಗಳು ಬಂದ ನಂತರ ಮತ್ತೊಂದು ಸ್ಟೆಂಟ್ ಅಳವಡಿಕೆ ಅಗತ್ಯವಿದೆಯೇ ಎಂದು ವೈದ್ಯರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ಮೂರು ವಾರಗಳ ಹಿಂದೆ ಲಘು ಹೃದಯಾಘಾತ ಹಿನ್ನೆಲೆಯಲ್ಲಿ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರ ಹೃದಯದಲ್ಲಿ 3 ಬ್ಲಾಕೇಜ್ ಗಳಿದ್ದು ಒಂದನ್ನು ತೆಗೆದು ಸ್ಟೆಂಟ್ ಅಳವಡಿಸಲಾಗಿತ್ತು. ಹೀಗ ಮತ್ತೊಂದು ಸ್ಟೆಂಟ್ ಅಳವಡಿಕೆ ಅಗತ್ಯವಾಗಬಹುದು ಎಂದು ವೈದ್ಯರು ತಿಳಿಸಿದ್ದರು.

ಗಂಗೂಲಿ ರಾತ್ರಿಯಿಡೀ ಚೆನ್ನಾಗಿ ನಿದ್ರಿಸಿದ್ದರು. ಬೆಳಿಗ್ಗೆ ಲಘು ಉಪಹಾರ ಸೇವಿಸಿದ್ದಾರೆ. ಮುಂದಿನ ಚಿಕಿತ್ಸೆಯ ಕೋರ್ಸ್ ಅನ್ನು ನಿರ್ಧರಿಸಲು ಇಂದು ಅವರ ಮೇಲೆ ಅನೇಕ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಖ್ಯಾತ ಹೃದ್ರೋಗ ತಜ್ಞ ದೇವಿ ಶೆಟ್ಟಿ ನೇತೃತ್ವದಲ್ಲಿ ಗಂಗೂಲಿ ಅವರ ಚಿಕಿತ್ಸೆ ನಡೆಯಲಿದೆ.

No Comments

Leave A Comment