Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ತೆಲಂಗಾಣ: ಹಾಡಹಗಲೇ ಟಿಡಿಪಿಯ ಮಾಜಿ ಪುರಸಭೆ ಸದಸ್ಯ ಬರ್ಬರ ಹತ್ಯೆ!

ಜಂಗಾಂವ್:  ತೆಲುಗು ದೇಶಂ ಪಕ್ಷದ ಮಾಜಿ ಪುರಸಭೆಯ ಸದಸ್ಯರೊಬ್ಬರನ್ನು ಇಂದು ಮುಂಜಾನೆ ಹಾಡಹಾಗಲೇ ಬರ್ಬರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದೆ ಹಳೇ ದ್ವೇಷದ ಕಾರಣವಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಂಗಾಂವ್ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಬಳಿಯ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಬಿದ್ದಿರುವುದನ್ನು ನೋಡಿದ ವಾಯು ವಿಹಾರಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತರು ಮಾಜಿ ಪುರಸಭೆ ಸದಸ್ಯ ಪುಲ್ಲಿ ಸ್ವಾಮಿ ಎಂದು ಗುರುತಿಸಿದ್ದಾರೆ. ಅಪರಿಚಿತ ಇಬ್ಬರು ವ್ಯಕ್ತಿಗಳಿಂದ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಟೌನ್ ಬಸ್ಟ್ ಸ್ಯಾಂಡ್ ಬಳಿ ಇರುವ ಮನೆಯೊಂದರಲ್ಲಿ ವಾಸಿಸುತ್ತಿದ್ದ ಸ್ವಾಮಿ, ಇಂದು ಮುಂಜಾನೆ ವಾಯುವಿಹಾರ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದಾಗ, ಸಮಾಜ ಕಲ್ಯಾಣ ಇಲಾಖೆಯ ಶಾಲೆ ಬಳಿ ಇಬ್ಬರು ಅಪರಿಚಿತರು ಲಾಂಗ್ ಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಸ್ವಾಮಿ ತೀವ್ರ ಗಾಯಗೊಂಡು ಅಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾರೆ.

ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

No Comments

Leave A Comment