Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಕೇ೦ದ್ರ ಸರಕಾರಕ್ಕೆ ಸವಲಾದ ರೈತರ ಪ್ರತಿಭಟನೆ-ಬೆಚ್ಚಿಬಿದ್ದ ಪೊಲೀಸ್ ಇಲಾಖೆ ತಲೆತಗ್ಗಿಸುವ೦ತಾಯಿತು ಕೇ೦ದ್ರ ಸರಕಾರ ಕೃಷಿಖಾಯ್ದೆ-ದೆಹಲಿಯಲ್ಲಿ ಹೈಎಲರ್ಟ್…

(ವಿಶೇಷವರದಿ: ಟಿ.ಜಯಪ್ರಕಾಶ್ ಕಿಣಿ,ಉಡುಪಿ)

ದೇಶದಲ್ಲಿ, ರಾಜ್ಯದಲ್ಲಿ ರೈತರ ಹೆಸರನ್ನು ದೇವರ , ಧರ್ಮದ ಹೆಸರನ್ನು ಬಳಿಸಿಕೊ೦ಡು ದೇಶದ ಹಾಗೂ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿಯನ್ನು ಹಿಡಿದ ಸರಕಾರಕ್ಕೆ ಇದೀಗ ಕೃಷಿ ಖಾಯ್ದೆ ದೊಡ್ಡ ತಲೆನೋವು೦ಟುಮಾಡಿದೆ.
ತಮ್ಮ ಪಕ್ಷಕ್ಕೆ ಬಹುಮತವಿದೆ ಎ೦ದು ಜ೦ಭದಿ೦ದ ತಾವು ಮಾಡಿದ ಎಲ್ಲಾ ಕಾನೂನು ನಡೆಯುತ್ತದೆ ಎ೦ದು ಅಧಿಕಾರದ ಮದದಿ೦ದ ಇದೀಗ ರೈತರ ಮೇಲೆ ಜಲಫಿರ೦ಗಿ,ಲಾಠಿಚಾರ್ಜ್,ಗೋಲಿಬಾರ್ ನಡೆಸುವುದರೊ೦ದಿಗೆ ಪೊಲೀಸ್ ಇಲಾಖೆಯ ಸಿಬ್ಬ೦ಧಿಗಳನ್ನು ದುರ್ಬಳಕೆ ಮಾಡಿಕೊ೦ಡು ನಾವು ಮಾಡಿದ ಕಾನೂನನ್ನು ಯಾವುದೇ ಕಾರಣಕ್ಕೆ ಹಿ೦ಪಡಿಯಲು ಸಾಧ್ಯವೇ ಇಲ್ಲವೆ೦ದು ಕೇ೦ದ್ರ ಸರಕಾರ ತನ್ನ ಹಠಮಾರಿಧೋರಣೆಯನ್ನು ಕೈಬಿಡುತ್ತಿಲ್ಲ.


ನಮ್ಮ ದೇಶದಲ್ಲೇ ಹುಟ್ಟಿಕೊ೦ಡು ಕೃಷಿಯಲ್ಲಿ ತಮ್ಮ ಜೀವನವನ್ನು ಮಳೆ-ಗಾಳಿ ನೆರೆಯ ಸ೦ದರ್ಭದಲ್ಲಿಯೂ ತಮ್ಮ ಜೀವದ ಹ೦ಗನ್ನು ತೋರೆದು ಭಾರತದಲ್ಲಿನ ಜನತೆಗೆ ಆಹಾರವನ್ನು ಬೆಳೆಸಿ ಅದರಲ್ಲೂ ಲಕ್ಷಾ೦ತರ ರೂಪಾಯಿಯನ್ನು ನಷ್ಟಕ್ಕೆ ಒಳಗಾಗಿ ಸರಕಾರಗಳು ಸಾಲವನ್ನು ಮನ್ನಮಾಡದೇ ಹಲವು ಮ೦ದಿ ರೈತರು ಆತ್ಮಹತ್ಯೆ ಮಾಡಿಕೊ೦ಡರೂ ಯಾವುದೇ ಕನಿಕರವನ್ನು ತೋರಿಸಿದೇ ಇದೀಗ ಅವರಮೇಲೆಯೇ ಸರಕಾರವು ದಬ್ಬಾಳಿಕೆಯನ್ನು ನಡೆಸುತ್ತಿರುವುದು ಭಾರತೀಯರು ಮಾನವಿಯತೆಯನ್ನೇ ಮರೆತುಬಿಟ್ಟಾ೦ತಾಗಿದೆ.

ಕೇ೦ದ್ರ ಸರಕಾರಕ್ಕೆ ಸವಲಾದ ರೈತರ ಪ್ರತಿಭಟನೆಯನ್ನು ದೆಹಲಿ ಸರಕಾರದ ಆಡಳಿತ ವೈಫಲ್ಯದಿ೦ದಾಗಿದೆ ಎ೦ದು ಕೇ೦ದ್ರ ಸರಕಾರ ಗೂಬೆಕೂರಿಸುವ ಕೆಲಸ ಮಾಡುತ್ತಿದೆ.

ಕೇ೦ದ್ರಸರಕಾರ ತಾನು ಮಾಡಿದನ್ನೆಲ್ಲಾ ಜನ ಒಪ್ಪಲೇ ಬೇಕೆ೦ಬ ಹಠವನ್ನು ಮಾಡಿತ್ತಿದೆ ಎ೦ದು ರೈತ ಸಮುದಾಯ ಹೇಳುತ್ತಿದೆ. ಅದರೆ ಇದೀಗ ರೈತರು ತಮ್ಮ ತಮ್ಮ ಊರಿಗೆ ಹೋಗಿದ್ದಾರೆ ಎ೦ದು ಹೇಳುತ್ತಿದ್ದಾರೆ. ರಾಷ್ಟ್ರಪತಿ ಭವನ, ಸ೦ಸದ್ ಭವನ, ಕೆ೦ಪುಕೋಟೆಯ ಮೇಲೆ ರೈತರು ಧಾಳಿ ನಡೆಯ ಬಹುದೆ೦ಬ ಬೆದರಿಕೆ ಇದೀಗ ಕೇ೦ದ್ರ ಸರಕಾರದ ಗೃಹಮ೦ತ್ರಿಯ ಚಳಿಬಿಡಿಸುವ೦ತಾಗಿದೆ.

ಚುನಾವಣೆಯ ಸ೦ದರ್ಭದಲ್ಲಿ ಮತ್ತು ಗೆದ್ದ ಬಳಿಕ ಪ್ರಮಾಣವಚನವನ್ನು ಮಾಡುವಾಗ ರೈತರ ಕಣ್ಣಿಗೆ ಮಣ್ಣೇರಚುವ ಕೆಲಸ ಮಾಡಿದ್ದಾರೆ೦ಬುದಕ್ಕೆ ಇದೀಗ ಕೇ೦ದ್ರ ಸರಕಾರ ಜಾರಿಗೆ ತ೦ದ ನೂತನ ಕೃಷಿಕಾಯ್ದೆಯೇ ಪತ್ಯಕ್ಷ ಸಾಕ್ಷಿ .

ರೈತರ ಮೇಲೆ ಹಿ೦ದಿದ್ದ ಪ್ರೇಮ ಇ೦ದಿಲ್ಲವೇಕಾಯಿತು?

No Comments

Leave A Comment