ದುಷ್ಕರ್ಮಿಗಳಿಂದ ಮಕ್ಕಳ ಅಪಹರಣಕ್ಕೆ ಯತ್ನ : ಮೂವರ ಬಂಧನ..! ಕುಂದಾಪುರ : ಉಡುಪಿ ಜಿಲ್ಲೆಯ ಕೋಟದಲ್ಲಿ ಬೆಂಗಳೂರುನಿಂದ ಬಂದ ತಂಡವೊಂದು ಮಕ್ಕಳ ಅಪಹರಣ ನಡೆಸಿದ್ದು, ಅವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಡ್ಡುಟ್ಡು ಸಮೀಪಸ ಜಪ್ರಿ ಎಂಬಲ್ಲಿ ಎಂಬಲ್ಲಿ ನಡೆದಿದೆ. ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಡ್ಡಟ್ಟು ಸಮೀಪ ಮಕ್ಕಳನ್ನು ಅಪಹರಿಸಲು ಸಂಚು ರೂಪಿಸಿದ್ದು ನಂತರ ಸ್ಥಳೀಯರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ ಎನ್ನಲಾಗಿದೆ. ನಂತರ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಘಟನೆಯಲ್ಲಿ ಸ್ಥಳೀಯ ವ್ಯಕ್ತಿ ಭಾಗಿಯಾಗಿದ್ದ ಎನ್ನಲಾಗಿದೆ. ಕೋಟ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. Share this:TweetWhatsAppEmailPrintTelegram