Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

72ನೇ ಗಣರಾಜ್ಯೋತ್ಸವ ಸಂಭ್ರಮ: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ವಜುಭಾಯ್ ವಾಲಾ

ಬೆಂಗಳೂರು: 72ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಂಭ್ರಮ ಮನೆ ಮಾಡಿದೆ. ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ರಾಜ್ಯಪಾಲ ವಜುಭಾಯ್ ವಾಲಾರಿಂದ ಧ್ವಜಾರೋಹಣ ನೆರವೇರಿದೆ.

ಧ್ವಜಾರೋಹಣ ಬಳಿಕ ರಾಜ್ಯಪಾಲ ವಜುಭಾಯ್ ವಾಲಾ ಅವರು ರಾಜ್ಯದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು “ರಾಜ್ಯದ ಜನತೆಗೆ ಗಣತಂತ್ರ ದಿನದ ಶುಭಾಶಯಗಳು. ಈ ವರ್ಷ ಸಾಕಷ್ಟು ಸವಾಲಿನ‌ ಮಧ್ಯೆ ರಾಜ್ಯ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ಕೆಲಸ ಮಾಡ್ತಿದೆ. ರಾಜ್ಯ ಸರ್ಕಾರ ಹಗಲಿರಳು ಕೆಲಸ ಮಾಡುತ್ತಿದೆ. ಮೋದಿ ದೂರದೃಷ್ಟಿಯಿಂದ ಆತ್ಮನಿರ್ಭರ ಭಾರತ ನಿರ್ಮಾಣವಾಗಿದೆ. ವಿಶ್ವದಲ್ಲೇ ಅತಿ ದೊಡ್ಡ ಲಸಿಕೆ ಅಭಿಯಾನ ಭಾರತದಲ್ಲಿ ಆಗಿದೆ. ಈ ಲಸಿಕಾ ಅಭಿಯಾನಕ್ಕೆ ನಾವು ಕೂಡ ಕೈಜೋಡಿಸಿದ್ದೇವೆ” ಎಂದು ಹೇಳಿದ್ದಾರೆ.

ತೋಟಗಾರಿಕೆ ಕ್ಷೇತ್ರದಲ್ಲಿ 701 ಕೋಟಿ ಬಿಡುಗಡೆ ಮಾಡಲಾಗಿದೆ. 15905ಹೆಕ್ಟರ್ ಪ್ರದೇಶವನ್ನ ಆಧುನಿಕ ನೀರಾವರಿ ತರಲಾಗಿದೆ. ಪರಿಸರ ಸ್ನೇಹಿ‌ ಮಾದರಿಯಲ್ಲಿ ಹಬ್ಬಗಳ ಆಚರಣೆ, ಜನವರಿ 14 ರಿಂದ ಯಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ 6 ಕಿ.ಮಿ ಮೆಟ್ರೋ ಲೈನ್ ಲೋಕಾರ್ಪಣೆ ಮಾಡಿದ್ದೇವೆ.

ಬೆಂಗಳೂರಿನಲ್ಲಿ 8015 ಕೋಟಿ ಅನುಮೋದಿತ ಮೊತ್ತದಲ್ಲಿ ಕೆರಗಳ ಸಂರಕ್ಷಣೆ ಮಾಡಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ರೂಪವನ್ನೇ ಬದಲಾಯಿಸಲಾಗ್ತಿದೆ. ಬಿಡಿದಿಯಲ್ಲಿ 210 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತ್ಯಾಜ್ಯದಿಂದ ಇಂಧನ ಎಂಬ ಯೋಜನೆ ಮಾಡಿದ್ದೇವೆ. ಪೋಲಿಸ್ ಪಡೆಯಲ್ಲಿ ಮಹಿಳಾ ಮೀಸಲಾತಿ ಶೇಕಡಾ 25 ಕ್ಕೆ ಹೆಚ್ಚಳ ಮಾಡಿದ್ದೇವೆ. ಪೋಲಿಸ್ ಇಲಾಖೆ ಗೃಹ ನಿರ್ಮಾಣಕ್ಕೆ 10000ವಸತಿ ಗೃಹಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಫೆಬ್ರವರಿಯಿಂದ ಬೀದರ್ ಏರ್‌ಪೋರ್ಟ್‌ ಕಾರ್ಯಾರಂಭಗೊಳ್ಳಲಿದೆ. ಖಜಾನೆ 2 ಯೋಜನೆ ಮೂಲಕ ಜನರು ಆನ್‌ಲೈನ್ ಮೂಲಕ ತೆರಿಗೆಯನ್ನು ಪಾವತಿಸಬಹುದು. ರಾಜ್ಯ ಜೈವಿಕ ಆರ್ಥಿಕತೆ 22.6 ಬಿಲಿಯನ್ ಅಮೆರಿಕನ್ ಡಾಲರ್ ಹಾಗೂ ನಾವೀನ್ಯತೆಗೆ ಉತ್ತೇಜನ ನೀಡಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಆರಂಭಿಸಲಾಗಿದೆ.

ಕೊವಿಡ್ ಮಧ್ಯೆ ಯಶಸ್ವಿಯಾಗಿ ದ್ವಿತೀಯ ಪಿಯು ಪರೀಕ್ಷೆ ನಡೆದಿದೆ. ಕಲಬುರಗಿ, ಚಿಂಚೋಳಿ ಎಪಿಎಂಸಿ ಇ-ನಾಮ್‌ಗೆ ಸೇರ್ಪಡೆಯಾಗಿದೆ. ಎಪಿಎಂಸಿ ಶುಲ್ಕ 0.60ಗೆ ಇಳಿಕೆಯಾಗಿದೆ. ಹಾಜರಿ ರಹಿತ, ಕಾಗದ ರಹಿತ ಸರ್ಕಾರಿ ಸೇವೆ ಮನೆಮನೆಗೆ ತಲುಪುತ್ತೆ. ಎಸ್‌ಸಿ, ಎಸ್‌ಟಿ ಸಮಗ್ರ ಅಭಿವೃದ್ಧಿಗೆ ರೂ.30 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರು ಭಾಷಣದಲ್ಲಿ ತಿಳಿಸಿದ್ದಾರೆ.

No Comments

Leave A Comment