ಉಡುಪಿ: ಕಾಲಿಗೆ ಸರಪಳಿ ಸುತ್ತಿಕೊಂಡು 1.4 ಕಿ.ಮೀ ಈಜಿ ದಾಖಲೆ ಬರೆದ ಗಂಗಾಧರ್ ಕಡೇಕಾರ್ ಉಡುಪಿ: ಗಂಗಾಧರ್ ಜಿ ಕಡೇಕಾರ್ ತಾವು ಪದ್ಮಾಸನ ಹಾಕಿಕೊಂಡ ಸ್ಥಿತಿಯಲ್ಲಿ ಕಾಲುಗಳಿಗೆ ಸರಪಳಿ ಬಿಗಿದುಕೊಂಡು ಸಮುದ್ರದಲ್ಲಿ 1.4 ಕಿ.ಮೀ ದೂರ ಈಜುವ ಮೂಲಕ ಇಂಡಿಯಾ ಬುಕ್ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ್ದಾರೆ.ಈ ಮೂಲಕ 65 ವರ್ಷದ ಕಡೇಕಾರ್ ಹೊಸ ದಾಖಲೆಯನ್ನು ರಚಿಸಿದ್ದಾರೆ. ಶ್ರೀದೇವಿ ಭಜನಾ ಮಂದಿರ ಬಳಿಯ ಪಡುಕೆರೆ ಬೀಚ್ನಲ್ಲಿ ಜನವರಿ 24 ರ ಭಾನುವಾರ ಬೆಳಿಗ್ಗೆ ಕಡೇಕಾರ್ ಈ ಸಾಧನೆ ಮಾಡಿದ್ದಾರೆ. ಅವರು ತಮ್ಮ ಕಾಲುಗಳಿಗೆ ಸರಪಳಿ ಬಿಗಿದುಕೊಂಡಿರುವುದು ಮಾತ್ರವಲ್ಲದೆ ಆ ಸರಪಳಿಗಳು ಬಿಚ್ಚಿ ಹೋಗದಂತೆ ಬೀಗವನ್ನೂ ಹಾಕಿಕೊಂಡಿದ್ದರು.. ಅವರು ಪದ್ಮಾಸನ ಭಂಗಿಯಲ್ಲಿ ಈಜುತ್ತಿದ್ದರು. ಬೆಳಿಗ್ಗೆ 8.36 ಕ್ಕೆ ಈಜು ಪ್ರಾರಭ ಮಾಡಿದ್ದ ಕಡೇಕಾರ್ 9.40 ಕ್ಕೆ ದಡ ತಲುಪಿದರು. ಕರಾವಳಿ ಕಾವಲು ಪೊಲೀಸರು ರಕ್ಷಣಾ ವ್ಯವಸ್ಥೆ ನೋಡಿಕೊಂಡಿದ್ದರು. ನೂತನ ದಾಖಲೆ ನಿರ್ಮಿಸಿದ ಕಡೇಕಾರ್ ಅವರನ್ನು ಉಡುಪಿ ಶಾಸಕ ರಘುಪತಿ ಭಟ್ ಅಭಿನಂದಿಸಿದರು. ಉಡುಪಿ ಜಿಲ್ಲಾ ಸಹಕಾರಿ ಮೀನು ಒಕ್ಕೂಟದ ಅಧ್ಯಕ್ಷ ಯಶ್ ಪಾಲ್ ಸುವರ್ಣ. ಕಾರ್ತಿಕ್ ಗ್ರೂಪ್ ಮಲ್ಪೆಯ ವ್ಯವಸ್ಥಾಪಕ ನಿರ್ದೇಶಕ ಹರಿಯಪ್ಪ ಕೋಟ್ಯಾನ್, ಹೆಚ್ಚುವರಿ ಡಿಸಿ ಸದಾಶಿವ ಪ್ರಭು, ಕರಾವಳಿ ಕಾವಲು ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಆರ್, ತೀರ್ಪುಗಾರ ಹರೀಶ್ ಆರ್, ಜೈ ದುರ್ಗಾ ಈಜು ಕ್ಲಬ್ (ರಿ)ಉಪಾಧ್ಯಕ್ಷ ಕಡೇಕರ್ ಚಂದ್ರ ಎಂ ಕುಂದರ್, ಹರ್ಷ ಮೆಂಡನ್, ಜನಾರ್ಧನ ಕೊಟ್ಯಾನ್ ಮತ್ತಿತರೆ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. Share this:TweetWhatsAppEmailPrintTelegram