Log In
BREAKING NEWS >
ನ್ಯಾಯಾಲಯ ಲಸಿಕೆಯ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಶ್ನಿಸಿದ್ದಕ್ಕೆ ಸಿಟಿರವಿ,ಕೇ೦ದ್ರ ಸಚಿವ ಸದಾನ೦ದ ಗೌಡರ ವರ್ತನೆಗೆ ರಾಜ್ಯದ ಎಲ್ಲೆಡೆ ಭಾರೀ ಆಕ್ರೋಶ....

ಪರ್ಯಾಯ ಪ೦ಚಶತಮಾನೋತ್ಸವ-ಗಣ್ಯರಿಗೆ ಸನ್ಮಾನದೊ೦ದಿಗೆ ಸ೦ಪನ್ನ

ಪರ್ಯಾಯ ಪ೦ಚಶತಮಾನೋತ್ಸವ-ಗಣ್ಯರಿಗೆ ಸನ್ಮಾನದೊ೦ದಿಗೆ ಸ೦ಪನ್ನ ಶನಿವಾರದ೦ದು ಪರ್ಯಾಯ ಶ್ರೀಈಶಪ್ರಿಯ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಸ೦ಪನ್ನ ಗೊ೦ಡಿತು.

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯಪಂಚಶತಮಾನೋತ್ಸವ”ದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಅಭ್ಯಾಗತರಾಗಿ ಆನೆಗುಡ್ಡೆ ಶ್ರೀವಿನಾಯಕ ದೇವಳದ ಆಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾದ್ಯಾಯ ಮತ್ತು ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣ ಇವರು ಅನಿಸಿಕೆಯನ್ನು ವ್ಯಕ್ತಪಡಿಸಿದರು.ತಮಿಳುನಾಡಿನ ಬಿ.ಜೆ.ಪಿ.ಯಾ ಉಪಾಧ್ಯಕ್ಷರಾದ ಅಣ್ಣಾಮಲೈ ಅವರು ಅಲ್ಲಿಂದಲೇ ವೀಡಿಯೋ ಸಂದೇಶ ನೀಡಿದರು.

ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ,ದಿ.ಕೆ.ಕೆ.ಪೈ ಇವರ ಸ್ಮರಣಾರ್ಥ ಅವರ ಮೊಮ್ಮಗ ಅಶ್ವಿನ್, ದಿ.ವಿಜಯನಾಥ ಶೆಣೈ ಇವರ ಸ್ಮರಣಾರ್ಥ ಪುತ್ರಿ ಅನುರೂಪಾ ಶೆಣೈ ಇವರಿಗೆ,ದಿ.ದೇವರಾಜ ಇವರ ಸ್ಮರಣಾರ್ಥ ಅವರ ಪುತ್ರ ರಾಜೇಶ್ ರಾವ್,ದಿ.ಟಿ.ವಿ.ರಾವ್ ಇವರ ಸ್ಮರಣಾರ್ಥ ಅವರ ಪುತ್ರ ಡಾ.ಶ್ರೀನಿವಾಸ ರಾವ್,ಮೂಡಬಿದ್ರೆಯ ದಿ.ಅಮರನಾಥ ಶೆಟ್ಟಿ ಇವರ ಸ್ಮರಣಾರ್ಥ ಧರ್ಮಪತ್ನಿ ಜಯಶ್ರೀ,ದಿ.ಕೆ.ವಿ.ಬಿಳಿರಾಯ ಇವರ ಸ್ಮರಣಾರ್ಥ ಅವರ ಪುತ್ರ ಸುರೇಶ ಬಿಳಿರಾಯ ಉಡುಪಿ,ಕುಂದಾಪುರದ ಮಾಜಿ ಶಾಸಕರಾದ ಏ.ಜಿ.ಕೊಡ್ಗಿ,ಅಪ್ಪಣ್ಣ ಹೆಗ್ಡೆ,ಉಡುಪಿಯ ಸೋಮಶೇಖರ ಭಟ್,ಗುಜ್ಜಾಡಿ ಪ್ರಭಾಕರ ನಾಯಕ್,ಯು.ಕೆ.ರಾಘವೇಂದ್ರ ರಾವ್,ಪ್ರೊ.ಎಂ.ಎಲ್.ಸಾಮಗ,ಮಲ್ಪೆ ಇವರಿಗೆ ಪರ್ಯಾಯ ಶ್ರೀಪಾದರು ಸನ್ಮಾನಿಸಿದರು.

No Comments

Leave A Comment