Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಗಣರಾಜ್ಯೋತ್ಸವ 2021: 3ನೇ ತಲೆಮಾರಿನ ಯುದ್ಧ ಟ್ಯಾಂಕ್ ‘ಎಂಬಿಟಿ ಭೀಷ್ಮ’ ರಾಜ್ ಪಥ್ ನ ಪ್ರಮುಖ ಆಕರ್ಷಣೆ!

ನವದೆಹಲಿ: ಭಾರತೀಯ ಸೇನೆಯ ಮುಖ್ಯ ಯುದ್ಧ ಟ್ಯಾಂಕ್‌ಗಳು (ಎಂಬಿಟಿ) ಟಿ -90 ಪೂರ್ವ ಲಡಾಖ್‌ನಲ್ಲಿ ಚೀನಾದ ಶಸ್ತ್ರಸಜ್ಜಿತ ಪಡೆಗಳ ವಿರುದ್ಧ ಕಾವಲಿಗೆ ನಿಯೋಜಿಸಲಾಗಿತ್ತು. ಆದರೆ ಈ ಬಾರಿ 2021 ರ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜಪಥ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಭಾರತೀಯ ಸೇನೆಯ ಬಹು ಶಕ್ತಿಶಾಲಿ ಯುದ್ಧ ಟ್ಯಾಂಕ್ ಆದ ಟಿ-90 16 ಸಾವಿರ ಅಡಿಗಳ ಎತ್ತರಕ್ಕೆ ಒಯ್ಯಲಾಗುತ್ತದೆ. ಈ ಯುದ್ಧ ಟ್ಯಾಂಕ್ ನ ಗುಣಮಟ್ಟ ಬಗ್ಗೆ ವಿವರಿಸಿದ ಟ್ಯಾಂಕ್ ಕಮಾಂಡರ್ ಕ್ಯಾಪ್ಟನ್ ಕರಣವೀರ್ ಸಿಂಗ್, ಇದು ಮೂರನೇ ತಲೆಮಾರಿನ ಟಿ-90 ಯುದ್ಧ ಟ್ಯಾಂಕ್ ಆಗಿದ್ದು, ಭೀಷ್ಮ ಎಂದು ಕರೆಯಲಾಗುತ್ತದೆ. ಅದರಲ್ಲಿ 125 ಎಂ.ಎಂ ಗನ್ ಇದ್ದು, ಭಾರತೀಯ ಸೇನೆಯಲ್ಲಿ ಹಲವು ಶಸ್ತ್ರಾಸ್ತ್ರಗಳನ್ನು ಕೆಡವಿ ಹಾಕುವ ಸಾಮರ್ಥ್ಯ, ಕ್ಷಿಪಣಿಯನ್ನು ಎದುರಿಸುವ ಸಾಮರ್ಥ್ಯ ಕೂಡ ಇದೆ ಎಂದರು.

ಈ ಯುದ್ಧ ಟ್ಯಾಂಕ್ 5 ಸಾವಿರ ಮೀಟರ್ ಅಂತರದ ಯಾವುದೇ ಗುರಿಯನ್ನು ತಟಸ್ಥಗೊಳಿಸುತ್ತದೆ. ಭೂಮಿಯಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವ್ಯಾಪ್ತಿಯಲ್ಲಿರಬಹುದು ಮತ್ತು ಅದು ನೀರಿನ ಅಡಿಯಲ್ಲಿಯೂ ಹೋಗುತ್ತದೆ. 5 ಮೀಟರ್ ನೀರು ಅದನ್ನು ಚಲಾಯಿಸಬಹುದು ಮತ್ತು ವೈಮಾನಿಕ ಗುರಿಗಳಿಗೆ ಇದು 12.7 ಎಂಎಂ ಎನ್ಎಸ್ವಿಟಿ ಗನ್ ಹೊಂದಿದೆ. ಇದು ಯಾವುದೇ ಯುದ್ಧ ವಿಮಾನವನ್ನು, ತನ್ನ ಸುತ್ತಮುತ್ತಲಿನ ಯಾವುದೇ ಡ್ರೋನ್ ಅನ್ನು ಉರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು.

ಈ ಬಾರಿ ಕೋವಿಡ್ -19 ನಿಯಮಗಳಿಂದಾಗಿ, ಸೈನ್ಯದಿಂದ ಆರು ಮೆರವಣಿಗೆಗಳು ನಡೆಯಲಿವೆ. ಪ್ರತಿ ತುಕಡಿ 96 ಸೈನಿಕರನ್ನು ಒಳಗೊಂಡಿರುತ್ತದೆ. ಈ ಹಿಂದೆ 144 ಸೈನಿಕರು ಇದ್ದರು.

No Comments

Leave A Comment