Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಹಿರಿಯ ಆರ್.ಎಸ್.ಎಸ್. ಮುಖಂಡ ಬಾಬುರಾವ್ ದೇಸಾಯಿ ವಿಧಿವಶ: ಸಂಸದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಬಾಬುರಾವ್ ದೇಸಾಯಿ (97) ಅವರು ವಿಧಿವಶರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ನ ಹಿರಿಯ ಪ್ರಚಾರಕರೂ ಆಗಿದ್ದ ದೇಸಾಯಿಯವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

1942ಕ್ಕೆ ಸಂಘ ಪರಿವಾರದ ಪ್ರಚಾರಕರಾಗಿ ಸೇರ್ಪಡೆಯಾಗಿದ್ದ ಬಾಬುರಾವ್ 1949ರಲ್ಲಿ ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡದ ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು. ಆ ನಂತರ ಧಾರವಾಡ, ಕಲಬುರಗಿ, ಬಳ್ಳಾರಿ ವಿಭಾಗ ಪ್ರಚಾರಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿ ಆಗಿ ನೆಮಕವಾಗಿದ್ದರು.

ಹಿರಿಯ ಮುಖಂಡರ ನಿಧನಕ್ಕೆ ಸಂಸದ ಪ್ರಹ್ಲಾದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

“ಸಂಘದ ಹಿರಿಯ ಪ್ರಚಾರಕರು, ನನ್ನ ಆತ್ಮೀಯ ಮಾರ್ಗದರ್ಶಕರು, ಹಿಂದೂ ಸಂಘಟನೆಗಳಿಗೆ ತಪಸ್ವಿಯಂತೆ ಸೇವೆ ಸಲ್ಲಿಸಿದ ವಿ.ಎಚ್.ಪಿ ಯ ರಾಷ್ಟ್ರೀಯ ಪದಾಧಿಕಾರಿಗಳು ಆಗಿದ್ದ ಮಾನ್ಯ ಶ್ರೀ ಬಾಬು ರಾವ್ ದೇಸಾಯಿ ಅವರು ನಿಧನರಾದ ಸುದ್ದಿ ಕೇಳಿ ಅತೀವ ಸಂತಾಪವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಸಂಸದರು ಟ್ವೀಟ್ ಮಾಡಿದ್ದಾರೆ.

No Comments

Leave A Comment