ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲುವೆಗೆ ಬಿದ್ದು ಮೂವರ ದುರ್ಮರಣ ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ನಗರದ ಕಿರೇಸೂರು ಬಳಿಯ ಮಲಪ್ರಭಾ ಕಾಲುವೆಯಲ್ಲಿ ನಡೆದಿದೆ. ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿಯಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸದ್ಯ, ನೀರುಪಾಲಾದ ಮೂವರಿಗಾಗಿ ಪೊಲೀಸರು ಮತ್ತು ಕಿರೇಸೂರು ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ವೇಳೆ ನತಾಶಾ ಬಂಡಾರಿ ಹಾಗೂ ಸಲ್ಮಾನ್ ಪಿಳ್ಳೈ ಎಂಬ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. Share this:TweetWhatsAppEmailPrintTelegram