“ರಕ್ತದಾನ ಮಹಾದಾನ ; ಬನ್ನಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಜೀವ ಉಳಿಸೋಣ “ ಉಡುಪಿ:ಮೊಗವೀರ ಯುವ ಸಂಘಟನೆ (ರಿ.) ಉಡುಪಿ, ಬೆಳ್ಳಂಪಲ್ಲಿ ಘಟಕ ಹಾಗೂ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ,ಶ್ರೀ. ಕೆ.ಕೃಷ್ಣಮೂರ್ತಿ ಆಚಾರ್ಯ, ಕಿನ್ನಿಮುಲ್ಕಿ ಇವರ ನೇತ್ರತ್ವದಲ್ಲಿ ಹಲವಾರು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಮಥುರಾ ಕಂಫರ್ಟ್ಸ್, ಶ್ರೀ ಕೃಷ್ಣ ಮಠ ಪಾರ್ಕಿಂಗ್ ಏರಿಯಾ, ಉಡುಪಿಯಲ್ಲಿ ನಡೆಯುವ “ಬ್ರಹತ್ ರಕ್ತದಾನ ಶಿಬಿರ” ವು ತಾರೀಕು 26/1/2021 ರ ಮಂಗಳವಾರ ಬೆಳಗ್ಗೆ 8:00 ರಿಂದ ಮಧ್ಯಾಹ್ನ 3:00 ರ ವರೆಗೆ ನಡೆಯಲಿರುವುದು. ಈ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನಿಗಳು ಭಾಗವಹಿಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವ೦ತೆ ಶ್ರೀ. ಕೆ. ಕೃಷ್ಣಮೂರ್ತಿ ಆಚಾರ್ಯ ಮತ್ತು ಶ್ರೀಮತಿ ಅಮೃತ ಕೃಷ್ಣಮೂರ್ತಿ ಆಚಾರ್ಯ, ಕಿನ್ನಿಮುಲ್ಕಿರವರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share this:TweetWhatsAppEmailPrintTelegram