Log In
BREAKING NEWS >
ಮಂಗಳೂರು ಕಡಲ ತೀರದಲ್ಲಿ ಟೌಕ್ಟೇ ಚಂಡಮಾರುತ ಅಬ್ಬರಕ್ಕೆ ಸಿಲುಕಿದ್ದ 9 ಮಂದಿಯ ರಕ್ಷಣೆ: ನೌಕಾಪಡೆ ಸಿಬ್ಬಂದಿಗೆ ಮುಖ್ಯಮಂತ್ರಿ ಧನ್ಯವಾದ...

ಬೆಂಗಳೂರು: ಎಇಇ ಮನೆ ಮೇಲೆ ಎಸಿಬಿ ದಾಳಿ, ಅಪಾರ ಪ್ರಮಾಣದ ಆಸ್ತಿ ಪತ್ತೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದ್ದು ಕೋಟಿ ಮೌಲ್ಯದ ನಗನಾಣ್ಯಗಳು ಪತ್ತೆಯಾಗಿದೆ.

ಆರೋಪಿ, ಭ್ರಷ್ಟ ಅಧಿಕಾರಿ ಅಂಜನಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ.ಇವರು ದಾವಣಗೆರೆ ತಾಲೂಕು ಲೋಕಿಕೆರೆ ಮೂಲದವರಾಗಿದ್ದು ನಿನ್ನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾಗ 35 ಲಕ್ಷ ನಗದು, 741 ಗ್ರಾಂ ಚಿನ್ನ ಸೇರಿದಂತೆ ಕೋಟಿ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಅಲ್ಲದೆ ಇಂದೂ ದಾಳಿ ಮುಂದುವರಿದಿದ್ದು ಒಟ್ಟೂ 1.2 ಕೆಜಿ ಚಿನ್ನ,9 ಕೆಜಿ ಬೆಳ್ಳಿ,5.80 ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು, ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಪೈಕಿ ಬೆಂಗಳೂರಿನ ಮನೆಯಲ್ಲಿ 42 ಲಕ್ಷ ಮೌಲ್ಯದ ವಸ್ತುಗಳು ಸಿಕ್ಕರೆ ಲೋಕಿಕೆರೆಯಲ್ಲಿ 2,26,39,000 ಮೌಲ್ಯದ ಆಸ್ತಿ ಪತ್ರ ಹಾಗೂ 8 ಕೆಜಿ ಬೆಳ್ಳಿ ಹಾಗೂ 5 ಗ್ರಾಂ ಚಿನ್ನ ದೊರಕಿದೆ. ಅಲ್ಲದೆ ಈ ಎಲ್ಲಾದರ ಕುರಿತು ಇದೀಗ ದೂರು ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ.

No Comments

Leave A Comment