BREAKING NEWS >
ನ.29ರ೦ದು ಶ್ರೀಕ್ಷೇತ್ರಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರ೦ಭ...

ಖ್ಯಾತ ಯಕ್ಷಗಾನ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಇನ್ನಿಲ್ಲ

ಕುಂದಾಪುರ: ಖ್ಯಾತ ಯಕ್ಷಗಾನ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಹೊಸನಗರ ತಾಲೂಕು ಹುಂಚ ಸಮೀಪದ ಆನೆಗದ್ದೆ ಸುಳ್ಳಳ್ಳಿ ಗ್ರಾಮದ ಚಿದಂಬರ ಹೆಗಡೆ ಅವರ ಪುತ್ರರಾದ ಸತೀಶ್ ಹೆಗಡೆ  ಅವರಿಗೆ 55 ವರ್ಷ ವಯಸ್ಸಾಘಿತ್ತು.

ಕಳೆದ ಹಲವು ವರ್ಷಗಳಿಂದ ಕಾಲಿನ ಸಮಸ್ಯೆ ಎದುರಿಸಿದ್ದ ಕಲಾವಿದ ಸತೀಶ್ ಹೆಗಡೆ ಅವರಿಗೆ ಕಿಡ್ನಿ ವೈಫಲ್ಯವಾಗಿದ್ದು ಕಳೆದ ಮೂರು ದಿನಗಳಿಂದ ಕೋಮಾದಲ್ಲಿದ್ದರು. ಅವರು ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ಹೇಳಿದೆ.

35 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡ ಸತೀಶ್ ಹೆಗಡೆ ವಿವಿಧ ಮೇಳಗಳಲ್ಲಿ ರಾವಣ, ಮಹಿಷಾಸುರ, ಕೌರವನ ಪಾತ್ರದಲ್ಲಿ ಮಿಂಚಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಸೋದರನನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಸ್ವಗ್ರಾಮ ಸುಳ್ಳಳ್ಳಿಯಲ್ಲಿ ಗುರುವಾರ ನಡೆಯಲಿದೆ.

No Comments

Leave A Comment