BREAKING NEWS >
ನ.29ರ೦ದು ಶ್ರೀಕ್ಷೇತ್ರಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರ೦ಭ...

ತಜ್ಞರ ಸಮಿತಿ ಎದುರು ಹಾಜರಾಗುವುದು ಬಿಡುವುದು ನಿಮ್ಮ ಇಚ್ಛೆ, ಆದರೆ ತಜ್ಞರಿಗೆ ಅವಮಾನ ಮಾಡಬೇಡಿ: ರೈತರಿಗೆ ಸುಪ್ರೀಂ

ನವದೆಹಲಿ: ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ 10 ನೇ ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧಗೊಂಡಿದೆ.

ಈ ನಡುವೆ ರೈತರ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಸಮಸ್ಯೆ ಬಗೆಹರಿಸಲು ನೇಮಕ ಮಾಡಿರುವ ತಜ್ಞರ ಸಮಿತಿ ಎದುರು ಹಾಜರಾಗುವುದು ಬಿಡುವುದು ರೈತರ ಇಚ್ಛೆಯಾಗಿದೆ. ಆದರೆ ಪೂರ್ವಾಗ್ರಹದಿಂದ ತಜ್ಞರ ಬಗ್ಗೆ ಹಗುರವಾಗಿ ಮಾತನಾಡುವುದು, ಅವಮಾನ ಮಾಡಬೇಡಿ ಎಂದು ಹೇಳಿದೆ.

ಇದೇ ವೇಳೆ ಗಣಾರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ನೀಡಲು ನಿರ್ಧರಿಸುವ ಅಧಿಕಾರ ದೆಹಲಿ ಪೊಲೀಸರಿಗೆ ಇದೆ ಎಂದು ಹೇಳಿದೆ. ಇದೇ ವೇಳೆ ಟ್ರ್ಯಾಕ್ಟರ್ ರ್ಯಾಲಿಗೆ ನಿರ್ಬಂಧ ವಿಧಿಸಲು ಕೋರಿದ್ದ ದೆಹಲಿ ಪೊಲೀಸರ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಇದೇ ವೇಳೆ ಸಮಿತಿಯಲ್ಲಿ ಇರುವ ಕೃಷಿ ಕ್ಷೇತ್ರದಲ್ಲಿರುವ ತಜ್ಞರ ಖ್ಯಾತಿಗೆ ಧಕ್ಕೆ ತರುತ್ತಿರುವುದಕ್ಕೆ ರೈತ ಒಕ್ಕೂಟಗಳೆಡೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ತಜ್ಞರಿಗೆ ಅವಾಮಾನ ಮಾಡುವ ಯಾವುದೇ ಹಕ್ಕು ಯಾರಿಗೂ ಇಲ್ಲ ಎಂದು ಸಿಜೆಐ ಹೇಳಿದ್ದಾರೆ. ಇದೇ ವೇಳೆ ಮುತ್ತಿಗೆ, ರಸ್ತೆ ತಡೆಗಳನ್ನು ಕೈಬಿಡುವಂತೆ ಸುಪ್ರೀಂ ಕೋರ್ಟ್ ರೈತರಿಗೆ ಹೇಳಿದೆ.

No Comments

Leave A Comment