Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಚೀನಾ ದುಸ್ಸಾಹಸ: ಭಾರತದ ಗಡಿಯೊಳಗೆ ಸದ್ದಿಲ್ಲದೆ ಹಳ್ಳಿಯನ್ನೇ ನಿರ್ಮಿಸಿದ ಡ್ರ್ಯಾಗನ್ ರಾಷ್ಟ್ರ, ಸ್ಯಾಟಲೈಟ್ ಚಿತ್ರಗಳು!

ನವದೆಹಲಿ: ಲಡಾಖ್ ಗಡಿಯಲ್ಲಿ ಸೇನೆ ಜಮಾವಣೆ ಮಾಡಿ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾ ಇದೀಗ ಸದ್ದಿಲ್ಲದೆ ತ್ಸಾರಿ ಚು ನದಿ ಸಮೀಪ ಹಳ್ಳಿಯನ್ನೇ ನಿರ್ಮಿಸಿದೆ.

ಬರೋಬ್ಬರಿ 101 ಮನೆಗಳನ್ನು ಚೀನಾ ನಿರ್ಮಿಸಿದೆ. 2019ರ ಆಗಸ್ಟ್ ನಲ್ಲಿ ಖಾಲಿ ಇದ್ದ ಜಾಗದಲ್ಲಿ 2020ರ ನವೆಂಬರ್ ವೇಳೆ ಒಂದು ಗ್ರಾಮವೇ ನಿರ್ಮಾಣವಾಗಿದೆ. ಇಲ್ಲಿ 101 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ವಿವಾದಿತ ಪ್ರದೇಶದಲ್ಲೇ ಚೀನಾ ಈ ಹಳ್ಳಿಯನ್ನು ನಿರ್ಮಿಸಿದೆ. ನಮ್ಮ ಗಡಿಯೊಳಗೆ ಸುಮಾರು 4.5 ಕಿ.ಮೀ ಒಳಬಂದಿದ್ದಾರೆ. ಗಡಿ ಭಾಗದಲ್ಲಿ ಚೀನಾ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡಿದೆ. ನಾವು ಸಹ ಗಡಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಗಡಿಯಲ್ಲಿ ಚೀನಾ ಈ ರೀತಿ ದುಸ್ಸಾಹಸ ನಡೆಸುತ್ತಿರುವುದು ಭಾರತದ ಪಾಲಿಗೆ ಬಹಳ ಗಂಭೀರ ವಿಚಾರವಾಗಿದೆ. ಈ ಜಾಗಕ್ಕಾಗಿ ಉಭಯ ರಾಷ್ಟ್ರಗಳ ನಡುವೆ ದೀರ್ಘ ಕಾಲದಿಂದ ವಿವಾದ ನಡೆಯುತ್ತಿದೆ. ಈ ಜಾಗವನ್ನು ಸಶಸ್ತ್ರ ಹೋರಾಟದ ಸ್ಥಳವೆಂದು ಗುರುತಿಸಲಾಗಿದೆ.

No Comments

Leave A Comment