Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಅನಂತಪದ್ಮನಾಭನ ಸೇವೆ ಸಕಲ ಫಲಪ್ರದ: ಪುತ್ತಿಗೆ ಶ್ರೀ

ಉಡುಪಿ:ಉಡುಪಿಯ ಪಣಿಯಾಡಿಯ ಇತಿಹಾಸ ಪ್ರಸಿದ್ಧ ಪ್ರಾಚೀನ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯ ಪೂರ್ವಭಾವಿಯಾಗಿ ಜನವರಿ 16 ,2021 ರಂದು ಬಾಲಾಲಯ ಪ್ರತಿಷ್ಠೆ ಕಾರ್ಯ ಕ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪುತ್ತಿಗೆ ಶ್ರೀಪಾದರು ಅನಂತಪದ್ಮನಾಭನ ಜೀರ್ಣೋದ್ಧಾರದ ಸೌಭಾಗ್ಯ ಒದಗಿರುವುದು ಭಕ್ತರ ಸುಕೃತ ಎಂದು ಬಣ್ಣಿಸಿದರು .
ಶ್ರೀದೇವರ ಬಿಂಬವನ್ನು ಸಂಕೋಚ ಗೊಳಿಸಿ ಬಾಲ್ ಆಲಯದಲ್ಲಿ ಪ್ರತಿಷ್ಠೆಮಾಡಲಾಯಿತು. ವೇದಮೂರ್ತಿ ಶ್ರೀ ಹಯವದನ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು .

ಊರ ಹತ್ತು ಸಮಸ್ತರು ಪುತ್ತಿಗೆ ಮಠದ ಆಡಳಿತದಲ್ಲಿರುವ ಈ ದೇವಸ್ಥಾನವನ್ನು ಐದೂವರೆ ಕೋಟಿ ರೂ ವೆಚ್ಚದಲ್ಲಿ ಎರಡು ಹಂತಗಳಲ್ಲಿ ಶಿಲಾಮಯವಾಗಿ ಜೀರ್ಣೋದ್ಧಾರ ಗೊಳಿಸಲು ತೀರ್ಮಾನಿಸಲಾಗಿದೆ .

No Comments

Leave A Comment