ಗುಂಡ್ಲುಪೇಟೆ: ಕಾಡಾನೆಗಳ ದಾಳಿಗೆ ತೋಟದ ಮನೆ ಧ್ವಂಸ; ಆತಂಕದಲ್ಲಿ ರೈತರು ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪ ಹೊಸಪುರ ಗ್ರಾಮದಲ್ಲಿ ಕಾಡಾನೆಗಳ ಆವಳಿ ಮುಂದುವರೆದಿದ್ದು ಹೊಸಪುರ ಗ್ರಾಮದ ಹೊರವಲಯದ ಮಹದೇವಚಾರಿ ಎಂಬುವವರ ಮನೆಯ ಮೇಲ್ಚಾವಣಿ ಕಿತ್ತೆಸೆದು ಮನೆಯನ್ನು ಧ್ವಂಸ ಮಾಡಿ ಕೂಯ್ದು ಇಟ್ಟಿದ್ದ ರಾಗಿ ತೆನೆಗಳನ್ನು ತಿಂದುಹಾಕಿವೆ. ಓಂಕಾರ ಅರಣ್ಯ ವಲಯದಿಂದ ಆಹಾರ ಅರಸಿ ಬಂದ ಕಾಡಾನೆಗಳು ಮೂರ್ನಾಲ್ಕು ಎಕರೆಯಲ್ಲಿ ರಾಗಿ ಬೆಲೆ ಬೆಳೆದ ಬೆಳೆದು ಕಟಾವು ಮಾಡಿಟ್ಟಿದ್ದರು, ಮಳೆ ಇದ್ದ ಕಾರಣ ಜಮೀನಿನ ಮನೆಯಲ್ಲಿ ರಾಗಿ ತೆನೆ ಸಂಗ್ರಹಿಸಿಟ್ಟಿದ್ದರು ಏಕಾಏಕಿ ಕಾಡಾನೆಗಳ ಗುಂಪು ತೆನೆಯನ್ನು ತಿಂದು ಮನೆ ಧ್ವಂಸ ಮಾಡಿವೆ. ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳತ್ತ ಕಾಡಾನೆಗಳು ಬಾರದ ರೀತಿಯಲ್ಲಿ ಆಳವಾದ ಟ್ರಂಚ್ ತೆಗೆದು ರೈಲ್ವೆ ಕಂಬಿಗಳನ್ನು ಜೋಡಿಸಬೇಕು ಟ್ರಂಚ್ ತೆಗೆದರೆ ಮಳೆಗಾಲದಲ್ಲಿ ಮುಚ್ಚಿಹೋಗುತ್ತದೆ ಅದ್ದರಿಂದ ರೈಲ್ವೆ ಕಂಬಿಗಳ ಅಳವಡಿಸಬೇಕು ಎಂದು ರೈತರು ಒತ್ತಾಯಿಸಿದರು. ರಾಗಿ ಹುಲ್ಲಿನ ವಾಸನೆಗೆ ಬಂದು ಮನೆಯ ಶೀಟ್ ಎತ್ತಿವೆ ನಾವು ಸಿಬ್ಬಂದಿಗಳ ಸಮೇತ ತೆರಳಿ ಮಾಜರು ಮಾಡಿದ್ದೇವೆ, ಅನೆ ದಾಳಿಯಿಂದ ನಷ್ಟವಾದವರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ, ಹುರುಳಿ ಕೂಯ್ಲಿನ ಸಮಯದಲ್ಲಿ ನಾಲ್ಕೈದು ಆನೆಗಳ ಗುಂಪು ಬರುತ್ತವೆ, ಟ್ರಂಚ್ ತೋಡಿದ್ದರು ಕೆರೆ ಸಮೀಪ ಮರಳಿನ ಪ್ರಮಾಣ ಹೆಚ್ಚಾಗಿದ್ದು ದಾರಿ ಮಾಡಿಕೊಂಡು ಬರುತ್ತವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಆನೆ ದಾಳಿಯಿಂದ ನಷ್ಟವಾಗಿರೋದು ಕಡಿಮೆ. Share this:TweetWhatsAppEmailPrintTelegram