Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಜ16ರಿ೦ದ 23ರವರೆಗೆ ಪರ್ಯಾಯದ ಪಂಚಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ- ಜ 18ಕ್ಕೆ ಮುಖ್ಯಮ೦ತ್ರಿಗಳಿ೦ದ “ವಿಶ್ವಪಥ” ನೂತನ ದರ್ಶನ ದಾರಿಯ ಉದ್ಘಾಟನೆ

ಉಡುಪಿ:ಶ್ರೀ ವಾದಿರಾಜ ಶ್ರೀಪಾದರಿಂದ ಪ್ರಾರಂಭಿಸಲ್ಪಟ್ಟ ದ್ವೈವಾರ್ಷಿಕ ಪರ್ಯಾಯದ ಪಂಚಶತಮಾನೋತ್ಸವ ಕಾರ್ಯಕ್ರಮವು ನಮ್ಮ ಪರ್ಯಾಯಾವಧಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯ. ದಿನಾಂಕ: 16-01-2021 ಶನಿವಾರದಿಂದ ದಿ.: 23-01-2021 ಶನಿವಾರದ ತನಕ ನಡೆಯುವ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಧಾರ್ಮಿಕ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಭಿನ್ನ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ ಮಠದ ವ್ಯವಸ್ಥಾಪಕರಾದ ಗೋವಿ೦ದ ರಾಜ್ ರವರು ಗುರುವಾರದ೦ದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಪನ್ಯಾಸಗೋಷ್ಠಿ:
ವಿದ್ವಾಂಸರಿಂದ ಪ್ರತಿದಿನ ಉಪನ್ಯಾಸಗೋಷ್ಠಿಗಳು, ವಿಶೇಷವಾಗಿ ಅಷ್ಟಮಠಗಳ ಕುರಿತು, ಪ್ರತಿ ಮಠಗಳ ಪರ್ಯಾಯಾವಧಿಯಲ್ಲಿ ನಡೆದ ಸಾಧನೆಗಳನ್ನು ನೆನಪಿಸುವ ಉಪನ್ಯಾಸಗಳು ನಡೆಯಲಿವೆ.

ವಿಶ್ವಪಥ:
ಭಕ್ತಾದಿಗಳಿಗೆ ಶ್ರೀಕೃಷ್ಣ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಿದ “ವಿಶ್ವಪಥ”ದಲ್ಲಿ ಸಾಗಿದರೆ ಕಟ್ಟಿಗೆ ರಥ, ಮಧ್ವ ಸರೋವರ, ಶ್ರೀಕೃಷ್ಣ ದೇವರ ಗರ್ಭಗುಡಿಯ ಸುವರ್ಣ ಗೋಪುರವನ್ನು ವೀಕ್ಷಿಸಿ ದೇವರ ದರ್ಶನ ಮಾಡಿ ಭೋಜನಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಹೊರಹೋಗುವ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ವಿಶ್ವಪಥ ದಾರಿಯನ್ನು ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರು ದಿನಾಂಕ: 18-01-2021ರಂದು ಸಾಯ೦ಕಾಲ ಉದ್ಘಾಟಿಸಲಿದ್ದಾರೆ.

ಪುಸ್ತಕ ಅನಾವರಣ:
“ದಿನಕ್ಕೊಂದು ಭಾಗವತಾಮೃತ ಬಿಂದುಗಳು” – ಶ್ರೀ ಅದಮಾರು ಮಠದ ಆನಂದ ಪ್ರಕಾಶನದಿಂದ ಪ್ರಕಟಣೆಗೊಳ್ಳಲಿರುವ ಪಲಿಮಾರು ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥರ ಭಾಗವತ ಪ್ರವಚನಗಳ ಸಂಗ್ರಹ ಕೃತಿಯು ದಿನಾಂಕ: 16-01-2021ರಂದು ಅನಾವರಣಗೊಳ್ಳಲಿದೆ.

ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ ಪ್ರದರ್ಶನ ಮತ್ತು ಮಾರಾಟ:
ಪರ್ಯಾಯ ಶ್ರೀಗಳ ಆಶಯದಂತೆ ಗ್ರಾಮೀಣ ಭಾಗದ ಶ್ರಮಿಕ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ 8 ದಿನಗಳ ಕಾಲ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ, ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ. ಪಶ್ಚಿಮ ಬಂಗಾಲ, ಒರಿಸ್ಸಾ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರದ ಮಧುಬನಿ ಕಲಾಪ್ರಕಾರಗಳು, ಮಿಥಿಲಾ ಚಿತ್ರ, ಮಂಜುಷಾ ಚಿತ್ರ, ಗೋದ್ನ ಚಿತ್ರ, ಕಾಲಿಘಟ್ ಪೈಂಟಿಂಗ್, ಪಟಚಿತ್ರ, ಲೋಹಶಿಲ್ಪ, ಎರಕಶಿಲ್ಪ, ಗೋಂಡು ಕಲಾಕೃತಿ, ಮಣ್ಣಿನ, ಹುಲ್ಲಿನ ಕಲಾಕೃತಿಗಳು ಹಾಗೆಯೇ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಬಿಜಾಪುರ, ಧಾರವಾಡ, ಶಿರಸಿ, ಕುಂದಾಪುರ, ಬೆಂಗಳೂರು, ಉಡುಪಿ ಭಾಗದ ಗ್ರಾಮೀಣ ಉತ್ಪನ್ನಗಳಾದ ಸೀರೆ, ಮಣ್ಣಿನ, ಹುಲ್ಲಿನ, ಮರದ ಕಲಾಕೃತಿಗಳು, ಸಾವಯವ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ವಿವಿಧ ಕಲಾ ಪ್ರಕಾರಗಳಾದ ಮಣ್ಣಿನ ಕಲಾಕೃತಿ ರಚನೆ, ಬುಟ್ಟಿ ರಚನೆ, ಸಹಜ ಬಣ್ಣದಲ್ಲಿ ಚಿತ್ರ ರಚನೆ ಮುಂತಾದ ಕಲಾ ಪ್ರಾತ್ಯಕ್ಷಿಕೆ ನಡೆಯಲಿದೆ. ದಿನಾಂಕ: 16-01-2021ನೇ ಶನಿವಾರ ನಡೆಯುವ ಪರ್ಯಾಯ ಪಂಚಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ ಪ್ರದರ್ಶನ ಮತ್ತು ಮಾರಾಟ ಹಾಗೂ ತುಳುನಾಡ ಪಾರಂಪರಿಕ ಪರಿಕರಗಳ ಪ್ರದರ್ಶನದ ಉದ್ಘಾಟನೆಯು ನಡೆಯಲಿದೆ. ಆಸಕ್ತರಿಗೆ ಮುಕ್ತ ಅವಕಾಶವಿರುತ್ತದೆ.

ನೂತನ ಮಳಿಗೆ:
ಸ್ಥಳೀಯ ಶ್ರಮಜೀವಿಗಳು ತಯಾರಿಸಿದ/ಬೆಳೆಸಿದ ವಸ್ತುಗಳ ಮಾರಾಟದ ಮಳಿಗೆಯನ್ನು ಆರಂಭಿಸಿ, ಮಧ್ಯವರ್ತಿಗಳಿಲ್ಲದೆ ಸ್ಥಳೀಯರಿಗ ಪೂರ್ಣ ಲಾಭ ಗಳಿಸುವಂತೆ ಮಾಡುವುದು ಶ್ರೀಪಾದರ ಯೋಜನೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ.

ಸಾಂಸ್ಕøತಿಕ ಕಾರ್ಯಕ್ರಮಗಳು:
ಶ್ರೀ ವಿಟ್ಠಲ ನಾಯಕ್, ಕಲ್ಲಡ್ಕ ಮತ್ತು ಬಳಗದವರಿಂದ ತುಳು ಸಂಸ್ಕøತಿ ಸಂಭ್ರಮ, ವಿ| ಕೃಷ್ಣ ಕುಮಾರ್ ಆಚಾರ್ಯ ಮೈಸೂರು ಮತ್ತು ಬಳಗದವರಿಂದ ತಾಳಮದ್ದಲೆ, ಶ್ರೀ ಸುಚೇತನ್ ರಂಗಸ್ವಾಮಿಯವರಿಂದ ಭಕ್ತಿ ಸಂಗೀತ, ಬೆಂಗಳೂರಿನ ಶ್ರೀ ರಾಜ್‍ಕಮಲ್ ಮತ್ತು ವೃಂದದವರಿಂದ ವೇಣು ನಿನಾದ, ನಾಡಿನ ಪ್ರಖ್ಯಾತ ಕಲಾವಿದರಿಂದ ಬಡಗುತಿಟ್ಟು ಯಕ್ಷಗಾನ, ಚೆನ್ನೈನ ಶ್ರೀ ಅಭಿಷೇಕ್ ರಘುರಾಮ್ ಅವರಿಂದ ಸಂಗೀತ, ಶ್ರೀಮತಿ ಜಯಂತಿ ಕುಮರೇಶ್ ಮತ್ತು ಬಳಗದವರಿಂದ ವೀಣಾ ವಾದನ, ಮೂಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ, ಪಂಡಿತ್ ವೆಂಕಟೇಶ ಕುಮಾರ್ ಮತ್ತು ಬಳಗದವರಿಂದ ಹಿಂದೂಸ್ಥಾನಿ ಸಂಗೀತ ಹೀಗೆ ಮುಂತಾದ ಅಂತರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.

ಶ್ರೀಮನ್‍ಮಧ್ವಾಚಾರ್ಯರ ಹಾಗೂ ಶ್ರೀ ವಾದಿರಾಜ ಶ್ರೀಪಾದರ ಕೃತಿಗಳ ಮೆರವಣಿಗೆ:
ದಿನಾಂಕ 18-01-2021 ಸೋಮವಾರ ಜೋಡುಕಟ್ಟೆಯಿಂದ ಮಧ್ಯಾಹ್ನ 3.30ಕ್ಕೆ ಮೇನೆಯಲ್ಲಿ ಶ್ರೀಮನ್ಮಧ್ವಾಚಾರ್ಯ ಹಾಗೂ ಶ್ರೀ ವಾದಿರಾಜ ಶ್ರೀಪಾದರ ಕೃತಿಗಳೊಂದಿಗೆ ರಥಬೀದಿವರೆಗೆ ಮೆರವಣಿಗೆ ನಡೆಯಲಿದೆ.

ತುಳುಗೋಷ್ಠಿ ಹಾಗೂ ತುಳುಲಿಪಿ ಕಲಿಕೆ ಉದ್ಘಾಟನೆ:
ದಿನಾಂಕ: 22-01-2021ನೇ ಶುಕ್ರವಾರ ಸೌರಮಧ್ವನವಮಿಯಂದು ತುಳುಗೋಷ್ಠಿ ಹಾಗೂ ತುಳುಲಿಪಿ ಕಲಿಕೆಯ ಉದ್ಘಾಟನೆ ನಡೆಯಲಿದೆ.

ಪರ್ಯಾಯ ಪಂಚಶತಮಾನೋತ್ಸವದ ಸಮಾರೋಪ ಸಮಾರಂಭ:
ದಿನಾಂಕ: 23-01-2021ನೇ ಶನಿವಾರ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎ೦ದು ವಿವರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮೀನಾರಾಯಣ ಮುಚ್ಚಿತ್ತಾಯ,ವೈ ಎನ್ ರಾಮಚ೦ದ್ರರಾವ್, ಪ್ರದೀಪ್ ರಾವ್ ,ಸ೦ತೋಷ್ ಉದ್ಯಾವರ, ಪುರುಷೋತ್ತಮ ಅಡ್ವೆ ಮತ್ತಿತರರು ಹಾಜರಿದ್ದರು.

No Comments

Leave A Comment