Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಬಿಹಾರ: ಮೂಕ ಹಾಗೂ ಕಿವಿ ಕೇಳದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕಣ್ಣಿಗೆ ಹಾನಿ

ಮಧುಬನಿ: ಮೂಕ ಹಾಗೂ ಕಿವಿ ಕೇಳದ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕಣ್ಣಿಗೆ ಹರಿತವಾದ ಆಯುಧದಿಂದ ಹಾನಿ ಮಾಡಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ.

ಆಕೆಯ ಎರಡು ಕಣ್ಣುಗಳಿಗೂ ಹಾನಿಯಾಗಿದೆ, ಆದರೆ ಆಕೆ ಸಂಪೂರ್ಣವಾಗಿ ದೃಷ್ಠಿ ಕಳೆದುಕೊಂಡಿದ್ದಾಳೆಯೇ ಎಂಬ ಬಗ್ಗೆ ಇನ್ನೂ ತಿಳಿದಿಲ್ಲ,  ವೈದ್ಯರು ಆಕೆಯನ್ನು ಪರಿಶೀಲಿಸುತ್ತಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಮೇಯಲು ಹೋಗಿದ್ದ ಮೇಕೆಯನ್ನು ಕರೆತರಲು ಹೋದಾಗ ಈ ದುರ್ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳೆಲ್ಲರೂ ಕೌಹುವಾ ದ ಬಾರ್ಹಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.

ಊರಿನ ಬೇರೆ ಮಕ್ಕಳೊಂದಿಗೆ ಬಾಲಕಿ ಮೇಕೆ ಕರೆತರಲು ಹೋಗಿದ್ದಳು, ಈ ವೇಳೆ ಘಟನೆ ನಡೆದಿದೆ, ಜೊತೆಯಲ್ಲಿದ್ದ ಒಂದು ಮಗು ಬಂದು ಬಾಲಕಿ ಮನೆಯನರಿಗೆ ಮಾಹಿತಿ ನೀಡಿದ್ದಾಳೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ಮನೋಹರಪುರ ಗ್ರಾಮದ ಹೊಲದಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು ಎಂದು ತಿಳಿದು ಬಂದಿದೆ,  ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು, ನಂತರ ವೈದ್ಯರ ಅನುಮತಿ ಮೇರೆಗೆ ಮಧುಬನಿ ಸಾದಾರ್ ಆಸ್ಪತ್ರೆಗೆ ಆಕೆಯನ್ನು ಶಿಫ್ಟ್ ಮಾಡಲಾಯಿತು.

No Comments

Leave A Comment