Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಚತ್ತೀಸ್ ಘಡ: ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ, ಕುಖ್ಯಾತ ಮಾವೋ ನಾಯಕನ ಹತ್ಯೆ

ರಾಯ್ ಪುರ: ಚತ್ತೀಸ್ ಘಡದಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಭೀಕರ ಎನ್ಕೌಂಟರ್ ನಡೆದಿದ್ದು, ಈ ಘಟನೆಯಲ್ಲಿ ಕುಖ್ಯಾತ ಮಾವೋ ನಾಯಕನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.

ಚತ್ತೀಸ್ ಘಡದ ದಾಂತೇವಾಡದಲ್ಲಿ ಈ ಘಟನೆ ನಡೆದಿದ್ದು, ಮಾವೋವಾದಿಗಳ ಇರುವಿಕೆ ಕುರಿತು ಖಚಿತ ಮಾಹಿತಿ ಪಡೆದ ಸಿಎಎಫ್ ನ 17ನೇ ಬೆಟಾಲಿಯನ್ ಮತ್ತು ಜಿಲ್ಲಾ ಮೀಸಲು ಸಶಸ್ತ್ರಪಡೆಗಳು ಚಿಕ್ಪಾಲ್ ಮತ್ತು ಮರ್ಜುಮ್ ದಟ್ಟಾರಣ್ಯ ಪ್ರದೇಶದಲ್ಲಿ  ಜಂಟಿ ಕಾರ್ಯಾಚರಣೆ ನಡೆಸಿದವು. ಈ ವೇಳೆ ಮಾವೋವಾಗಿಗಳು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ್ ಗುಂಡಿನ ಕಾಳಗ ನಡೆದಿದ್ದು, ಘಟನೆಯಲ್ಲಿ ಮಾವೋದಿಗಳ ಕುಖ್ಯಾತ ನಾಯಕ ಹಿಡ್ಮಾ ಮುಚಾಕಿ ಸಾವನ್ನಪ್ಪಿದ್ದಾನೆ. ಈತ ಕಟೇಕಲ್ಯಾಣ್ ಪ್ರದೇಶ ಸಮಿತಿ ಸದಸ್ಯನಾಗಿದ್ದು, ಈತನ ಮೇಲೆ ಸರ್ಕಾರ 5 ಲಕ್ಷ ರೂ ಬಹುಮಾನ ಘೋಷಣೆ ಮಾಡಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ದಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಗುಂಡಿನ ಕಾಳಗ ನಡೆದಿದೆ. ಮಾವೋದಿಗಳ ಕುಖ್ಯಾತ ನಾಯಕ ಹಿಡ್ಮಾ ಮುಚಾಕಿ ಹತ್ಯೆ ಬಳಿಕ ಈ ತಂಡದ ಇತರೆ ಸದಸ್ಯರು ಸಮೀಪದ ದಟ್ಟಾರಣ್ಯದೊಳಗೆ ನುಗ್ಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

No Comments

Leave A Comment