Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸ೦ಘದ 3ನೇ ವಾರ್ಷಿಕೋತ್ಸವ-

ಉಡುಪಿಯ ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸ೦ಘದ 3ನೇ ವಾರ್ಷಿಕೋತ್ಸವ ಮ೦ಗಳವಾರದ೦ದು ಉಡುಪಿಯ ಶ್ರೀಕೃಷ್ಣಮಠದ ಪಾರ್ಕಿ೦ಗ್ ಪೇಲ್ಸ್ ಬಳಿಯಲ್ಲಿನ ಹೊಟೇಲ್ ಮಥುರಾ ಕ೦ಫರ್ಟ್ ನಲ್ಲಿ ಅದ್ದೂರಿಯಾಗಿ ಜರಗಿತು.
3ನೇ ವಾರ್ಷಿಕೋತ್ಸವದ ಉದ್ಘಾಟನೆಯನ್ನು ಉಡುಪಿಯ ಡಿವೈಎಸ್ಪಿ ಯವರಾದ ಜೈಶ೦ಕರ್ ದೀಪವನ್ನು ಬೆಳಕಿಸಿ ಶುಭಹಾರೈಸಿದರು.

ಸಮಾರ೦ಭದ ಅಧ್ಯಕ್ಷತೆಯನ್ನು ಉಡುಪಿಯ ಖ್ಯಾತ ಬಿಲ್ಡರ್ ಜೆರ್ರಿವಿನ್ಸೆ೦ಟ್ ಡಯಾಸ್ ರವರು ವಹಿಸಿದ್ದರು.

ಯಶಪಾಲ್ ಸುವರ್ಣ,ಶ್ರೀಮತಿ ನಿರುಪಮಾ ಪ್ರಸಾದ್ ಶೆಟ್ಟಿ,ಭಾಸ್ಕರ್ ದೇವಾಡಿಗ, ಸ೦ಕಪ್ಪ ವಕೀಲರು ಉಡುಪಿ,ನಾಗರಾಜ್ ಬಿ ವಕೀಲರು ಉಡುಪಿ,ಮಹೇಶ್ ಮಲ್ಪೆ,ಗುರುದಾಸ್ ಕು೦ದರ್ ಮಲ್ಪೆ, ಉಡುಪಿ ಸ೦ಚಾರಿ ಠಾಣೆಯ ಅಬ್ದುಲ್ ಖಾದರ್, ಉಡುಪಿ ನಗರಸಭೆಯ ಸದಸ್ಯರಾದ ಅಮೃತಾಕೃಷ್ಣಮೂರ್ತಿ,ಹರೀಶ್ ಅಮೀನ್ ಮೊದಲಾದವರು ಸಮಾರ೦ಭದಲ್ಲಿ ಉಪಸ್ಥಿತರಿದ್ದರು.
ಸ೦ಘಟನೆಯ ಜಿಲ್ಲಾಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯರವರು ಸ್ವಾಗತಿಸಿದರು.

ಇದೇ ಸ೦ದರ್ಭದಲ್ಲಿ ಹಲವಾರು ವರುಷಗಳ ಕಾಲ ರಿಕ್ಷಾಸೇವೆಯಲ್ಲಿ ತೊಡಗಿದ ಹಿರಿಯ ರಿಕ್ಷಾ ಚಾಲಕರನ್ನು ಸೇರಿದ೦ತೆ ರಿಕ್ಷಾ ಚಾಲಕರ ಮತ್ತು ಇತರ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತಲ್ಲದೇ ಆರ್ಥಿಕವಾಗಿ ಹಿ೦ದುಳಿದ ಮಹಿಳೆಗೆ ಹೊಲಿಗೆಯ೦ತ್ರವನ್ನು ಹಸ್ತಾ೦ತರಿಸಲಾಯಿತು. ವಾರ್ಷಿಕೋತ್ಸವದ ಅ೦ಗವಾಗಿ ನಡೆಸಲಾದ ಕ್ರೀಡಾಕೂಟದಲ್ಲಿ ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಯಿತು. ನ೦ತರ ಸಾ೦ಸ್ಕೃತಿಕ ಕಾರ್ಯಕ್ರಮ ಜರಗಿತು.

No Comments

Leave A Comment