Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಶ್ರೀಗಂಧ ಕಳ್ಳತನ: ಆರ್ ಆರ್ ನಗರ ಪೊಲೀಸರಿಂದ ನಾಲ್ವರ ಬಂಧನ 10 ಲಕ್ಷ ರೂ. ಮೌಲ್ಯದ ಮಾಲು ವಶ

ಬೆಂಗಳೂರು: ಶ್ರೀಗಂಧ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ರಾಜ ರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಸುಮಾರು 10 ಲಕ್ಷ ರು ಮೌಲ್ಯದ ಶ್ರೀಗಂಧದ ತುಂಡುಗಳನ್ನು ಆರೋಪಿಗಳು ಕದ್ದೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೇಶ್, ಲೋಕೇಶ್, ಗೋವಿಂದರಾಜು, ಮತ್ತು ರವಿ ಎಂಎಸ್ ಬಂಧಿತ ಆರೋಪಿಗಳು,  ಬಂಧಿತರು ಚನ್ನಪಟ್ಟಣ ಮೂಲದವರಾಗಿದ್ದಾರೆ, ಆರೋಪಿಗಳಿಂದ ಶ್ರೀಗಂಧ ತೆಗೆದುಕೊಳ್ಳಲು ಬರುತ್ತಿದ್ದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿದ್ದು ಶೀಘ್ರವೇ ಆತನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 178 ಕೆಜಿ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.  ಅಪರಾಧಕ್ಕೆ ಬಳಸಿದ ಕೊಡಲಿ, ಮಚ್ಚು ಮತ್ತು ಎರಡು ಬೈಕ್ ಗಳನ್ನು ಸೀಜ್ ಮಾಡಲಾಗಿದೆ.

ಸೆಪ್ಟೆಂಬರ್ 11 ರ ರಾತ್ರಿ ಕೆಂಗೇರಿ-ಉತ್ತರಹಳ್ಳಿ ಮುಖ್ಯ ರಸ್ತೆಯ ಕಲಾ ಫಾರ್ಮ್‌ನಿಂದ ಎರಡು ಮರಗಳನ್ನು ಕಡಿದಿದ್ದರು. ಈ ಸಂಬಂಧ  ಫಾರ್ಮ್ ಮಾಲೀಕ ಡಾ.ರವಿ ಪ್ರಕಾಶ್ ಅವರು ಪೊಲೀಸ್ ದೂರು ದಾಖಲಿಸಿದ್ದರು.

No Comments

Leave A Comment