ಜಮ್ಮು-ಕಾಶ್ಮೀರ: ಟೌನ್ ಶಿಪ್ ನಿರ್ಮಾಣಕ್ಕಾಗಿ ಸೇನೆಯಿಂದ ಕಾರ್ಗಿಲ್ ಭೂಮಿ ತೆರವು!
ಶ್ರೀನಗರ: ಯೋಜಿತ ರೀತಿಯಲ್ಲಿ ನಾಗರಿಕ ಟೌನ್ ಶಿಪ್ ನಿರ್ಮಾಣಕ್ಕಾಗಿ ಹಾದಿ ಸುಗಮಗೊಳಿಸಲು ಕಾರ್ಗಿಲ್ ನಲ್ಲಿ ಸುಮಾರು 375 ಎಕರೆಗಳಷ್ಟು ಭೂಮಿಯನ್ನು ಭಾರತೀಯ ಸೇನೆ ಇನ್ನೂ ಆರು ತಿಂಗಳಲ್ಲಿ ತೆರವುಗೊಳಿಸಲಿದೆ.ಕಾರ್ಗಿಲ್ ಡೆಪ್ಯೂಟಿ ಕಮೀಷನರ್ , ಲಡಾಖ್ ಬೆಟ್ಟಿ ಅಭಿವೃದ್ಧಿ ಮಂಡಳಿ ಸಿಇಒ ಬಸೀರ್ -ಉಲ್- ಹಕ್ ಮತ್ತು 121 ಇನ್ ಪೆಂಟ್ರಿ ವಿಭಾಗೀಯದ ಬ್ರಿಗೆಡಿಯರ್ ವಿವೇಕ್ ಭಕ್ತಿ ನಡುವಣ ಪರಸ್ಪರ ತಿಳುವಳಿಕೆ ಒಪ್ಪಂದದೊಂದಿಗೆ ಒಂದು ವರ್ಷಗಳ ನಡುವಣ ಮಾತುಕತೆ ಕೊನೆಗೊಂಡಿತು.
ಸ್ಥಳೀಯವಾಗಿ ಖುರ್ಬಥಂಗ್ ಪ್ರಸ್ಥಭೂಮಿ ಎಂದು ಹೆಸರಾದ ಈ ಸ್ಥಳವನ್ನು ಯುದ್ಧ ಭೂಮಿ, ಫೈರಿಂಗ್ ವಲಯ ಮತ್ತಿತರ ಕಾರ್ಯಾಚರಣೆಗಾಗಿ ಸೇನೆ ಬಳಸುತಿತ್ತು. ಸೇನೆಗೆ ಪರ್ಯಾಯ ಭೂಮಿ ನೀಡುವುದಾಗಿ ನಾಗರಿಕ ಆಡಳಿತ ಭರವಸೆ ನೀಡಿದೆ.
ಒಪ್ಪಂದದಂತೆ ಮಾರ್ಚ್ ನಿಂದ ಭೂಮಿ ತೆರವು ಕಾರ್ಯವನ್ನು ಸೇನೆ ಆರಂಭಿಸಲಿದ್ದು, ಆರು ತಿಂಗಳೊಳಗೆ ನಾಗರಿಕ ಆಡಳಿತದ ನಿಯಂತ್ರಣಕ್ಕೆ ಒಪ್ಪಿಸಲಿದೆ.ಖುಬರ್ಥಂಗ್ ನ ಮಾರಾಠ ಘಟಕ ಮತ್ತು ಮುಲ್ಬೇಕ್ ನಲ್ಲಿ ಸೇನೆಗೆ 3 ಸಾವಿರ ಕ್ಯಾನಲ್ ಪರ್ಯಾಯ ಭೂಮಿಯನ್ನು ನೀಡುವುದಾಗಿ ಬಸೀರ್ -ಉಲ್- ಹಕ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ರೀತಿಯಲ್ಲಿ ಕಾರ್ಗಿಲ್ ನಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.2015 ಏಪ್ರಿಲ್ ನಲ್ಲಿ ಖುರ್ಬಥಂಗ್ ಪ್ರಸ್ಥಭೂಮಿಯಲ್ಲಿ ಭೂಮಿಯನ್ನು ತೆರವುಗೊಳಿಸುವಂತೆ ಪಿಡಿಪಿ- ಬಿಜೆಪಿ ಮೈತ್ರಿ ಸರ್ಕಾರ ಸೇನೆಯನ್ನು ಕೇಳಿಕೊಂಡಿತ್ತು. ಅಗತ್ಯವಿದ್ದರೆ ಸೇನೆಗೆ ಪರಿಹಾರ ನೀಡುವ ನೀಡುವ ಸಂಬಂಧ ಸೂಕ್ತ ಮಾರ್ಗಸೂಚಿ ರೂಪಿಸಿದ ನಂತರ ನಿರ್ಧರಿಸಲಾಗುವುದು ಎಂದು ಬಸೀರ್ -ಉಲ್- ಹಕ್ ತಿಳಿಸಿದರು.