Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಗುಡುಗು ಸಹಿತ ಭಾರೀ ಮಳೆ: ಸಿಡಿಲು ಬಡಿದು ಉಡುಪಿಯಲ್ಲಿ ಹೋಟೆಲ್ ಬೆಂಕಿಗಾಹುತಿ

ಡುಪಿ: ಜಿಲ್ಲೆಯಲ್ಲಿ ಸುರಿದ ಗುಡುಗು ಸಹಿತ‌ ಭಾರೀ ಮಳೆ ಹಿನ್ನಲೆಯಲ್ಲಿ, ಸಿಡಿಲು ಬಡಿದು ಹೋಟೆಲ್ ಬೆಂಕಿಗಾಹುತಿಯಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಸಮೀಪವಿರುವ ಸಪ್ತಮಿ ಹೋಟೆಲ್ ಸಿಡಿಲು ಹೊಡೆತಕ್ಕೆ ಹೋಟೆಲ್ ಸಂಪೂರ್ಣ ಭಸ್ಮವಾಗಿದೆ.

ಸಪ್ತಮಿ ಹೋಟೆಲ್ ಬೆಂಕಿ ‌ನಂದಿಸಲು ಅಗ್ನಿ‌ ಶಾಮಕ ದಳ ಹರಸಾಹಸ ಪಟ್ಟಿದ್ದು, ಅಗ್ನಿ ‌ಶಾಮಕದಳದ ಕಾರ್ಯಾಚರಣೆಯಿಂದ ಭಾರೀ ಅನಾಹತ ತಪ್ಪಿದಂತಾಗಿದೆ.  ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ, ಹೊಟೆಲ್ ಮಾಲೀಕ ಸತೀಶ್ ಮತ್ತು ಕೆಲಸಗಾರರು ತಮ್ಮ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳಿದ್ದರು.

ಘಟನಾ ಸ್ಥಳದಲ್ಲಿ ಅಗ್ನಿ ‌ಶಾಮಕ ದಳ ಕಾರ್ಯಾಚರಣೆ ನಡೆಸಿದೆ. ಸಿಡಿಲಿನ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.  ಬ್ರಹ್ಮವಾರ ವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಸಬ್ ಇನ್ಸ್‌ಪೆಕ್ಟರ್ ಗುರುನಾಥ್ ಮತ್ತು ಇತರರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.  ಸ್ಥಳೀಯ ಜನರು ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಸಿಬ್ಬಂದಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡಿದರು.

No Comments

Leave A Comment