Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ರೂರ್ಕೆಲಾ ಸ್ಟೀಲ್ ಪ್ಲಾಂಟ್ ನಲ್ಲಿ ವಿಷಾನಿಲ ಸೋರಿಕೆ: 4 ಗುತ್ತಿಗೆ ಕಾರ್ಮಿಕರ ಸಾವು

ರೂರ್ಕೆಲಾ: ರೂರ್ಕೆಲಾ ಸ್ಟೀಲ್ ಪ್ಲಾಂಟ್ ನ ಕಲ್ಲಿದ್ದಲು ರಸಾಯನಿಕ ಘಟಕದಲ್ಲಿ ವಿಷಯುಕ್ತ ಅನಿಲ ಸೋರಿಕೆಯಾದ ಪರಿಣಾಮ ನಾಲ್ವರು ಗುತ್ತಿಗೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನಾಲ್ವರು  ಕಾರ್ಮಿಕರು ಸಾವನ್ನಪ್ಪಿರುವುದನ್ನು ರೂರ್ಕೆಲಾ ಇಸ್ಪಾಟ್ ಕಾರ್ಖಾನೆ ಕರ್ಮಚಾರಿ ಸಂಘ ದೃಢಪಡಿಸಿದೆ.

ನಾಲ್ವರನ್ನು ಇಸ್ಪಾಟ್ ಸರ್ಕಾರಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ನಿರ್ವಹಣಾ ಗುತ್ತಿಗೆದಾರ ಸಂಸ್ಥೆ ಸ್ಟಾರ್ ಕನ್ಸ್ಟ್ರಕ್ಷನ್ ಮೂಲಕ ಕಾರ್ಮಿಕರನ್ನುಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು  ಎಂದು ಆರ್ ಎಸ್ ಪಿ ನಿರ್ವಹಣಾ ಮೂಲಗಳು ತಿಳಿಸಿವೆ.

ಇನ್ನೂ ಗಾಯಗೊಂಡ ಇತರ ಕಾರ್ಮಿಕರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ, ಗಣೇಶ್ ಚಂದ್ರ ಪೈಲಾ, ಅಭಿಮನ್ಯು ಸಾಹು, ರಬೀಂದ್ರ ಸಾಹು, ಬ್ರಹ್ಮಾನಂದ ಪಾಂಡಾ ಗಾಯಗೊಂಡ ಕಾರ್ಮಿಕರಾಗಿದ್ದಾರೆ. ವಿಷಾನಿಲ ಸೋರಿಕೆಗೆ  ಏನು ಕಾರಣ ಎಂಬುದು ತಿಳಿದು ಬಂದಿಲ್ಲ.

No Comments

Leave A Comment