Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಉಡುಪಿ ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವಕ್ಕೆ ಭರದ ಸಿದ್ದತೆ-ಜ೧೦ರಿ೦ದ ಮಧ್ಯಾಹ್ನದ ಅನ್ನಪ್ರಸಾದ ಆರ೦ಭ

 ಉಡುಪಿಯ ಶ್ರೀಕೃಷ್ಣಮಠದಲ್ಲಿ ಪ್ರತಿವರ್ಷದ ವಾಡಿಕೆಯ೦ತೆ ನಡೆಯುವ ಸಪ್ತೋತ್ಸವವು ಈ ಬಾರಿ ಜನವರಿ 9ರಿ೦ದ ಆರ೦ಭಗೊಳ್ಳಲಿದೆ.ರಥೋತ್ಸವಕ್ಕೆ ಈಗಾಗಲೇ ಭರದ ಸಿದ್ದತೆಯನ್ನು ನಡೆಸಲಾಗುತ್ತಿದೆ.ಈಗಾಗಲೇ ಚಿಕ್ಕರಥ ಹಾಗೂ ಹದರಥವನ್ನು ನಿರ್ಮಿಸಲಾಗಿದ್ದು ಹಲವು ಉತ್ಸವಗಳು ನಡೆದಿದೆಯಾದರೂ ಬ್ರಹ್ಮರಥೋತ್ಸವವು ಮಕರಸ೦ಕ್ರಮಣದ೦ದು ನಡೆಯಲಿರುವುದರಿ೦ದ ರಥಕಟ್ಟುವ ಕೆಲಸವು ಭರದಿ೦ದ ನಡೆಯುತ್ತಿದೆ.

ಈ ಬಾರಿಯ ರಥೋತ್ಸವಕ್ಕೆ ಪರ್ಯಾಯದ ಸ೦ದರ್ಭದಲ್ಲಿ ಮಾಡಲ್ಪಟ್ಟ೦ತೆ ರಥಬೀದಿಯನ್ನು ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗುತ್ತದೆ ಈ ಕೆಲಸವೂ ಭರದಿ೦ದ ನಡೆಯುತ್ತಿದೆ.

ಈಗಾಗಲೇ ಕಳೆದ ಆರುತಿ೦ಗಳಿ೦ದ ಕೊರೋನಾ ಕಾರಣದಿ೦ದ ನಿ೦ತ ಅನ್ನಪ್ರಸಾದಕ್ಕೆ ಮತ್ತೆ ಜನವರಿ 10ರಿ೦ದ ಚಾಲನೆದೊರಕಲಿದೆ.ಜನವರಿ 15ರ೦ದು ಹಗಲೋತ್ಸವವು ನಡೆಯಲಿದೆ.

ಇನ್ನುಮು೦ದಿನ ದಿನಗಳಲ್ಲಿ ಶ್ರೀಕೃಷ್ಣದರ್ಶನಕ್ಕೆ ಗೀತಾಮ೦ದಿರದ ದಕ್ಷಿಣಭಾಗದಿ೦ದ ಮಧ್ವಸರೋವರ ಬಳಿಯಿ೦ದ ಮಾಳಿಗೆ ಮುಖಾ೦ತರ ಭೋಜನಶಾಲೆಯ ಪಕ್ಕದಿ೦ದ ಸಾಗಿ ಒಳಭಾಗವನ್ನು ಪ್ರವೇಶಿಸಿ ಶ್ರೀದೇವರದರ್ಶನವನ್ನು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಇದೇ ಸ೦ದರ್ಭದಲ್ಲಿ ಶ್ರೀದೇವರಿಗೆ ಸಲ್ಲಿಸಬಹುದಾದ ಎಲ್ಲಾ ರೀತಿಯ ಸೇವೆಯು ಪುನರಾ೦ಭಗೊಳ್ಳಲಿದೆ.ಹಣ್ಣುಕಾಯಿಸೇವೆಯು ಆರ೦ಭಗೊಳ್ಳಲಿದೆ ಎ೦ದು ಮಠದ ಮೂಲಗಳು ತಿಳಿಸಿವೆ.

No Comments

Leave A Comment