Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಹೃದಯಾಘಾತ: ರಂಗಸ್ಥಳದಲ್ಲೇ ಕುಸಿದು ಬಿದ್ದು ಮಂದರ್ತಿ ಮೇಳದ ಸಾಧು ಕೊಠಾರಿ ವಿಧಿವಶ

ಉಡುಪಿ: ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆಯಲ್ಲೇ ಹೃದಯಾಘಾತವಾಗಿ ಕಲಾವಿದನೊಬ್ಬ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದ ಶಿರಿಯಾರದಲ್ಲಿರುವ ಕಾಜ್ರಲ್ಲಿ ಸಮೀಪದ ಕಲ್ಕಟ್ಟೆಯಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ನಡೆದ ಘಟನೆಯಲ್ಲಿ ಮಂದರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಅಸುನೀಗಿದ್ದಾರೆ.

‘ಮಹಾಕಲಿ ಮಗಧೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಮಯದಲ್ಲೇ ನಸುಕಿನ 3 ಗಂಟೆ ಸುಮಾರಿಗೆ ಅವರು ವೇದಿಕೆಯಲ್ಲಿ ಎದೆನೋವಿನಿಂದ ಬಳಲಿದ್ದರು. ಕೂಡಲೇ ಅವರ ವೇಷದ ನಿಲುವಂಗಿಯನ್ನು ತೆಗೆದು ಮೇಳದ ಮುಖ್ಯ ಭಾಗವತ, ಯಕ್ಷಗಾನ ತಂಡ ವ್ಯವಸ್ಥಾಪಕ ಸದಾಶಿವ ಅಮೀನ್ ವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಕೊಠಾರಿ ಕುಟುಂಬದೊಂದಿಗೆ ಬಾರ್ಕೂರ್ನಲ್ಲಿ ನೆಲೆಸಿದ್ದರು, ಬಟಗು ತಿಟ್ಟು ಯಕ್ಷಗಾನ ಕಲೆಯ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾಗಿ ಕೊಠಾರಿಯವರನ್ನು ಹೆಸರಿಸಲಾಗುತ್ತದೆ. ಕಳೆದ ನಾಲ್ಕು ದಶಕಗಳಿಂದ ಅವರು ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿದ್ದರು.

No Comments

Leave A Comment