Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಸೆಂಟ್ರಲ್ ವಿಸ್ಟಾ ಯೋಜನೆ ಮುಂದುವರಿಕೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಡಿಡಿಎ ಕಾಯ್ದೆಯಡಿ ಅಧಿಕಾರವನ್ನು ಚಲಾಯಿುಸುವುದು ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪರಿಸರ ಸಚಿವಾಲಯದ ಅನುಮತಿಯ ಶಿಫಾರಸುಗಳು ಮಾನ್ಯವಾಗಿದ್ದು ಸೂಕ್ತವಾಗಿದೆ. ನಾವು ಅದನ್ನು ಎತ್ತಿಹಿಡಿಯುತ್ತೇವೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ನಿರ್ಮಾಣ ಕಾಮಗಾರಿ ಆರಂಭಿಸಲು ಪರಂಪರಾ ಸಂರಕ್ಷಣಾ ಸಮಿತಿಯ ಅನುಮೋದನೆ ಅಗತ್ಯವಾಗಿದ್ದು, ಯೋಜನೆಯ ಪ್ರತಿಪಾದಿಕರು ಸಮಿತಿಯಿಂದ ಅನುಮೋದನೆ ಪಡೆಯುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸೆಂಟ್ರಲ್ ವಿಸ್ಟಾ ಪ್ರದೇಶದ ಮರು ಅಭಿವೃದ್ಧಿಗೆ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯ ಮೌಲ್ಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು.

ಕೇಂದ್ರ ದೆಹಲಿಯ ಲುಟೆಯನ್ಸ್ ವಲಯದಲ್ಲಿ ಹೊಸ ಸಂಸತ್ ಹಾಗೂ ಇತರ ಕೇಂದ್ರ ಸರ್ಕಾರಿ ಕಚೇರಿಗಳನ್ನು ನಿರ್ಮಿಸುವ ಉದ್ದೇಶದಿಂದ ಸಿದ್ದಪಡಿಸಲಾಗುತ್ತಿರುವ ೨೦ ಸಾವಿರ ಕೋಟಿ ರೂಪಾಯಿ ವೆಚ್ಚದ ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುತ್ತಿದೆ.

ದೆಹಲಿ ಅಭಿವೃದ್ದಿ ಪ್ರಾಧಿಕಾರದ ಶಿಫಾರಸ್ಸಿನಂತೆ ಸೆಂಟ್ರಲ್ ವಿಸ್ತಾ ಅಭಿವೃದ್ದಿ ಯೋಜನೆಗೆ ಅಗತ್ಯವಾಗಿರುವ ಭೂಮಿ ಬದಲಾವಣೆಗೆ
ಕೇಂದ್ರ ಸರ್ಕಾರ ಈ ಮೊದಲು ಅನುಮೋದನೆ ನೀಡಿತ್ತು. ಅಲ್ಲದೆ, ಹೊಸ ಪಾರ್ಲಿಮೆಂಟ್ ಭವನ ನಿರ್ಮಾಣದ ಯೋಜನೆಗೂ ಕೂಡ ಒಪ್ಪಿಗೆ ಸೂಚಿಸಿತ್ತು. ಪ್ರಸ್ತುತ ಇರುವ ಪಾರ್ಲಿಮೆಂಟ್ ಭವನ, ರಾಷ್ಟ್ರಪತಿ ಭವನ, ನಾರ್ತ್ ಸೌತ್ ಬ್ಲಾಕ್ ಭವನಗಳನ್ನು 1931ರಲ್ಲಿ ನಿರ್ಮಿಸಿದ್ದರು. ಆದರೆ ಈ ವಿಸ್ಟಾ ಯೋಜನೆ ಪ್ರಕಾರ ಹೊಸ ಪಾರ್ಲಿಮೆಂಟ್ ಭವನ ನಿರ್ಮಿಸಬೇಕೆಂದು ಕೇಂದ್ರ ಸರ್ಕಾರ ನಿರ್ಣಯಿಸಿದೆ.

ಪ್ರಸ್ತುತ ಪರಿಸ್ಥಿತಿಗಳಲ್ಲಿ, ದೆಹಲಿಯ ಹೃದಯಭಾಗದಲ್ಲಿ ೨೦,೦೦೦ ಕೋಟಿ ರೂ.ವೆಚ್ಚದ ಕೇಂದ್ರ ವಿಸ್ಟಾ ಅಭಿವೃದ್ಧಿ ಯೋಜನೆ ಆರಂಭಿಸುವುದನ್ನು ತಡೆಹಿಡಿಯಬೇಕು ಆ ಹಣವನ್ನು ದೇಶದಲ್ಲಿ ಆಸ್ಪತ್ರೆಗಳಂತಹ ಮೂಲಸೌಕರ್ಯ ಒದಗಿಸಲು ಬಳಸಬೇಕು ಎಂದು ಸೋನಿಯಾಗಾಂಧಿ ಪ್ರಧಾನಿ ಮೋದಿಗೆ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

No Comments

Leave A Comment