Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಹಕ್ಕಿ ಜ್ವರದಿಂದ ಸಾವಿರಾರು ವಲಸೆ ಪಕ್ಷಿಗಳ ಸಾವು: ಹಿಮಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮ ಬಂದ್

ಶಿಮ್ಲಾ: ಉತ್ತರ ಭಾರತದಲ್ಲಿ ಹಕ್ಕಿಜ್ವರ ತೀವ್ರಗೊಂಡಿದ್ದು, ವಿವಿಧ ದೇಶಗಳಿಂದ ಹಿಮಾಚಲ ಪ್ರದೇಶಕ್ಕೆ ಬಂದಿದ್ದ ಸಾವಿರಾರು ವಲಸೆ ಪಕ್ಷಿಗಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿವೆ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪಾಂಗ್ ಡ್ಯಾಮ್‌ ನದಿಯ ಸುತ್ತಮುತ್ತ 1800ಕ್ಕೂ ಅಧಿಕ ವಲಸೆಗಳು ಮೃತಪಟ್ಟಿದ್ದು,. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಬ್ಬಾತು, ಗಾವಿಲಾ, ರೀವರ್‌ ಟೇಲ್‌ ಸೇರಿದಂತೆ ವಿವಿಧ ಪ್ರಬೇಧಕ್ಕೆ ಸೇರಿದ 1800ಕ್ಕೂ ಹೆಚ್ಚು ಪಕ್ಷಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿವೆ. ಈ ಬಗ್ಗೆ ತಜ್ಞರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಹಕ್ಕಿಜ್ವರದಿಂದಲೇ ಹಕ್ಕಿಗಳು ಸಾವನ್ನಪ್ಪಿವೆ ಎಂದು ಕಾಂಗ್ರಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮೃತಪಕ್ಷಿಗಳ ರಕ್ತ ಹಾಗೂ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ಇನ್ನಷ್ಟೆ ವರದಿ ಬರಬೇಕಿದೆ.

ನದಿ ಪಾತ್ರದ ಸುಮಾರು 10 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಬಂದ್‌ ಮಾಡಲಾಗಿದೆ. ಹಾಗೆಯೇ ಕೋಳಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಕೋಳಿಗಳು ಇರುವ ಕೋಳಿ ಫಾರ್ಮ್ ಗಳಲ್ಲಿ ತುರ್ತಾಗಿ ಪರೀಕ್ಷೆ ನಡೆಸುವಂತೆ ಮತ್ತು ಸೋಂಕು ಪೀಡಿತ ಕೋಳಿಗಳನ್ನು ವೈಜ್ಞಾನಿಕವಾಗಿ ನಾಶ ಪಡಿಸುವಂತೆ ಆದೇಶ ನೀಡಲಾಗಿದೆ  ಎಂದು ಅವರು ಮಾಹಿತಿ ನೀಡಿದ್ದಾರೆ.

No Comments

Leave A Comment