Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಮಹಾರಾಷ್ಟ್ರ: ಮೂರು ವರ್ಷದ ಕಂದಮ್ಮನನ್ನು ಅಪಹರಿಸಿ ಅತ್ಯಾಚಾರ, ವ್ಯಕ್ತಿ ಬಂಧನ

ಮಹಾರಾಷ್ಟ್ರ:  ಮೂರು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪಲ್ಗಾರ್ ಜಿಲ್ಲೆಯಲ್ಲಿ ಶನಿವಾರ ಘಟನೆ ನಡೆದಿದ್ದು, ತಲಸಾರಿ ತಾಲೂಕಿನ ಗ್ರಾಮವೊಂದರ ಗುಡಿ ಸಲಿನಲ್ಲಿ ತನ್ನ ತಾಯಿಯೊಂದಿಗೆ ಮಲಗಿದ್ದ ಬಾಲಕಿಯನ್ನು 38 ವರ್ಷದ ಆರೋಪಿ ಕರೆದೊಯ್ದಿದ್ದಾನೆ.

ಆರೋಪಿ ಮಗುವನ್ನು ಅಪಹರಿಸಿ ಹತ್ತಿರದ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯನ್ನು ಸ್ಥಳದಲ್ಲಿಯೇ ಬಿಟ್ಟು ಆತ ಪರಾರಿಯಾಗಿದ್ದಾನೆ ಎಂದು ತಲಸಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯ್ ವಾಸವೆ ತಿಳಿಸಿದ್ದಾರೆ.

ಬಳಿಕ, ಆಕೆಯನ್ನು ಹೊಲದಲ್ಲಿ ಕಂಡ ಮಗುವಿನ ಪೋಷಕರು ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ದಿದ್ದು, ಸದ್ಯ ಅಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಶ್ವಾನ ದಳದ ನೆರವು ಪಡೆದ ಪೊಲೀಸರು, ಘಟನಾ ಸ್ಥಳದಲ್ಲಿ ದೊರೆತ ಚಪ್ಪಲಿ ಗುರುತಿನ ಆಧಾರದ ಮೇಲೆ ನೆರೆಯ ಕೇಂದ್ರಾಡಳಿತ ಪ್ರದೇಶ ದಮನ್‌ನ ಕಾರ್ಖಾನೆಯೊಂದರಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

No Comments

Leave A Comment