Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಡ್ರಗ್ ಪೆಡ್ಲರ್ ಜೊತೆ ಸಂಪರ್ಕ: ಕನ್ನಡ ನಟಿ ಶ್ವೇತಾ ಕುಮಾರಿ ಬಂಧನ

ಮುಂಬಯಿ: ಡ್ರಗ್ ಪೆಡ್ಲರ್ ಜತೆ ನಿಕಟ ಸಂಪರ್ಕ ಇಟ್ಟುಕೊಂಡು ಮಾದಕ ಜಾಲವನ್ನು ವಿಸ್ತರಿಸಿದ ಆರೋಪದಡಿ ಮತ್ತೊಬ್ಬ ಕನ್ನಡದ ನಟಿ ಶ್ವೇತಾ ಕುಮಾರಿಯನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ರಿಂಗ್ ಮಾಸ್ಟರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ವೇತಾ ಕುಮಾರಿ ಮುಂಬಯಿನ ಹೋಟೆಲ್ ನಲ್ಲಿ ತಂಗಿದ್ದರು. ಡ್ರಗ್ ಪೆಡ್ಲರ್ ಜತೆ ತಂಗಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ 400 ಗ್ರಾಂ ಡ್ರಗ್ ಸಮೇತ ಡ್ರಗ್ ಪೆಡ್ಲರ್ ಚಾಂದ್ ಶೇಖ್ ಮತ್ತು ಶ್ವೇತಾ ಅವರನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಆಧರಿಸಿ ಮಾದಕ ಜಗತ್ತಿನೊಂದಿಗೆ ನೇರ ನಂಟು ಹೊಂದಿದ ವಿಚಾರವಾಗಿ ಶ್ವೇತಾ ಕುಮಾರಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಮತ್ತು ವೈದ್ಯಕೀಯ ಪರೀಕ್ಷೆಗೂ ಹಾಜರು ಪಡಿಸಲಿದ್ದಾರೆ.

No Comments

Leave A Comment