Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ: ಡಾ. ಗಾಯತ್ರೀ ನಾವಡಗೆ ಡಾ.ಜಿ.ಶಂ.ಪ. ಪುರಸ್ಕಾರ

ಚಾಮರಾಜನಗರ: 2020ನೇ ಸಾಲಿನ ಕರ್ನಾಟಕ  ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು ದಕ್ಷಿಣ ಕನ್ನಡದ ಡಾ. ಗಾಯತ್ರೀ ನಾವಡ ಅವರಿಗೆ ಡಾ. ಜಿ.ಶಂ.ಪ ಪುರಸ್ಕಾರ ಲಭಿಸಿದೆ. ಅಲ್ಲದೆ ಪ್ರೊ. ಬಸವರಾಜ ಸಬರದ ಅವರನ್ನು ಡಾ. ಬಿ.ಎಸ್. ಗದ್ದಗೀಮಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇನ್ನು , 30 ಜಿಲ್ಲೆಗಳ ತಲಾ ಒಬ್ಬ ಜಾನಪದ ಕಲಾವಿದರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಈ ಸಾಲಿಅ ಪ್ರಶಸ್ತಿ ಕುರಿತಾದ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ.

ಈ ಬಾರಿಯ ಪ್ರಶಸ್ತಿ ಪ್ರಧಾನ ಸಮಾರಂಬ ಚಾಮರಾಜನಗರದಲ್ಲಿಯೇ ನಡೆಯಲಿದ್ದು ಫೆಬ್ರವರಿ ಮೊದಲ ವಾರದಲ್ಲಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ,

janapad-academy-award

janapad-academy-award

ಡಾ. ಗಾಯತ್ರೀ ನಾವಡ

ಗಾಯತ್ರೀ ನಾವಡ ಸ೦ಶೋಧನೆ, ಸ್ತ್ರೀವಾದ, ಸಂಸ್ಕೃತಿ ವಿಮರ್ಶೆ, ಜಾನಪದ ಸ೦ಗ್ರಹ, ಅನುಭಾವ ಸಾಹಿತ್ಯ, ಬುಡಕಟ್ಟು ಅಧ್ಯಯನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಂಶೋಧಕಿಯಾಗಿ ದುಡಿದವರು.ಕನ್ನಡ ಮತ್ತು ತುಳು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ. ಗಾಯತ್ರೀ   ಕನ್ನಡ ಮತ್ತು ತುಳು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ. ಸ೦ಶೋಧನೆ, ಸ್ತ್ರೀವಾದ, ಸಂಸ್ಕೃತಿ ವಿಮರ್ಶೆ, ಜಾನಪದ ಸ೦ಗ್ರಹ, ಅನುಭಾವ ಸಾಹಿತ್ಯ, ಬುಡಕಟ್ಟು ಅಧ್ಯಯನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಂಶೋಧಕಿಯಾಗಿ ದುಡಿದವರು. ಇವರು ತಮ್ಮ ಹೈಸ್ಕೂಲ್ ಮತ್ತು ಕಾಲೇಜು ಜೀವನದಲ್ಲಿರುವಾಗಲೇ ‘ಜೀವಿ’ ಎ೦ಬ ಕಾವ್ಯನಾಮದಲ್ಲಿ ಕತೆ, ಕವನ, ಲೇಖನ ಬರೆಯುತ್ತಿದ್ದರು. ಗಾಯತ್ರಿ ನಾವಡರ ಬರವಣಿಗೆಗಳು, ಅಧ್ಯಯನಗಳು ತುಂಬಾ ಆಳ ಮತ್ತು ತಾರ್ಕಿಕವಾಗಿವೆ.

1944 ಆಗಸ್ಟ್ 7ರ೦ದು ಇವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಜನಿಸಿದರು. ಇವರ ತ೦ದೆ ಅನಂತ ಕೃಷ್ಣವರ್ಣ ಕೋಟೇಶ್ವರ ಮತ್ತು ಇವರ ತಾಯಿ ಕಮಲಮ್ಮ. ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಲ್ಲಿ ಗಾಯತ್ರಿಯವರು ಕೊನೆಯವರು. ಇವರು1975ರಲ್ಲಿ ಜಾನಪದ ವಿದ್ವಾ೦ಸ, ಕನ್ನಡ ಸ೦ಶೋಧಕ, ಸ೦ಘಟಕರಾದ ಪ್ರೊ. ಎ. ವಿ. ನಾವಡರವರನ್ನು ವಿವಾಹವಾದರು. ಬಿ.ಎ. ಪದವಿ ಅನ೦ತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿ೦ದ ೧೯೮೮ರಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡ ಎಂ.ಎ. ಪದವಿಯ ನ೦ತರ ಎರಡು ಪಿ.ಎಚ್.ಡಿ. ಪದವಿಯನ್ನು ಪಡೆದರು. ಮೊದಲಿಗೆ ‘ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ 1997ರಲ್ಲಿ [ಗುಲ್ಬರ್ಗಾ]] ವಿಶ್ವವಿದ್ಯಾಲಯದಿಂದ, ನ೦ತರ ‘ಸಿರಿಪಂಥ: ಮಹಿಳಾ ಸಬಲೀಕರಣ – ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಡಾ.ಟಿ.ಎಂ.ಎ.ಪೈ ರಾಷ್ಟ್ರೀಯ ಫೆಲೋಷಿಪ್ ನಲ್ಲಿ ೨೦೦೪ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ.ಪದವಿ ಪಡೆದರು

ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಸಿರಿಪ೦ಥ:ಮಹಿಳಾ ಸಬಲೀಕರಣ -ಸಮಾಜೋ ಸಾ೦ಸೃತಿಕ ಅಧ್ಯಯನ (ಮಹಾಪ್ರಬ೦ಧಗಳು), ಮೂಕಜ್ಜಿ ಬದುಕು ಸಾಹಿತ್ಯ , ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ, , ತೇರು, ಸಾವಿರ ಕೀರ್ತನೆಗಳು, ಅಲೆಯೊಸಗೆ, ಕರಾವಳಿಯ ಜನಪದ ಕತೆಗಳು, ಕರಾವಳಿ ಮದುವೆ ಹಾಡುಗಳು (ಸಂಪಾದಿತ ಕೃತಿಗಳು),  ವಿರಚನೆ, ಭಾರತೀಯ ಸ್ತ್ರೀವಾದ: ಒಂದು ಸಂಕಥನ, ಮಹಿಳಾ ಸಂಕಥನ , ಸಿರಿಪಂಥ: ಮಹಿಳಾ ಸಾಂಸ್ಕೃತಿಕ ಸಬಲೀಕರಣದ ಮಾದರಿ (ಸ್ತ್ರೀವಾದಿ ವಿಮರ್ಶಾ ಕೃತಿಗಳು) ಇವರ ಪ್ರಮುಖ ಕೃತಿಗಳಾಗಿದೆ.

‘ಮೂಕಜ್ಜಿ ಬದುಕು ಸಾಹಿತ್ಯ’ ಅತ್ಯುತ್ತಮ ಕೃತಿಯೆಂಬುದಕ್ಕೆ ೧೯೯೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪೀಟರ್ ಜೆ.ಕ್ಲಾಸ್ ‘ಮಹಿಳಾ ಜಾನಪದ ಪ್ರಶಸ್ತಿ’, ‘ಚಿತ್ತಾರ ಬರೆದ ಬದುಕು’ ಕೃತಿಗೆ ೧೯೯೦ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ‘ಉತ್ತಮ ಕೃತಿ’ ಬಹುಮಾನ, ಲೋಕ ಶಿಕ್ಷಣ ನಿರ್ದೇಶನಾಲಯ ಪುರಸ್ಕಾರ,  ‘ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ’ ಗ್ರಂಥಕ್ಕೆ ಗು೦ಡ್ಮಿ ಜಾನಪದ ಪ್ರಶಸ್ತಿ,  ‘ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ’ ಗ್ರಂಥಕ್ಕೆ ಆರ್ಯಭಟ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದಿಂದ ‘ಸಂಸ್ಕೃತಿ ಸಂಶೋಧಕಿ’ ಪುರಸ್ಕಾರ – ಇವು ಅವರಿಗೆ ಸಂದ ಪ್ರಮುಖ ಪ್ರಶಸ್ತಿ, ಗೌರವಗಳು.

ಪ್ರೊ. ಬಸವರಾಜ ಸಬರದ

ಬಸವರಾಜ ಸಬರದ ಇವರು 20 ಜೂನ್ 1944ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು ತಂದೆ ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.(ಕನ್ನಡ) ಪದವಿಧರರು.

ನನ್ನವರ ಹಾಡು, ಹೋರಾಟ, ಮೂಡಲಕ ಕೆಂಪು ಮೂಡ್ಯಾನ, ನೂರು ಹನಿಗಳು, ದನಿಯತ್ತಿ ಹಾಡೇನ, ಬೆಳದಿಂಗಳು ಬಿಸಿಲಾತು, ಗುಬ್ಬಿಯೊಂದು ಗೂಡು ಕಟ್ಯಾದೊ (ಕವನ ಸಂಕಲನ), ಪ್ರತಿರೂಪ, ರೆಕ್ಕೆ ಮೂಡಿದಾಗ, ಬೆಳ್ಳಿ, ನರಬಲಿ, ಬೆಳ್ಳಕ್ಕಿ ಸಾಲು, ಬೀದಿ ನಾಟಕಗಳು(ನಾಟಕಗಳು), ಹೊಸದಿಕ್ಕು, ವಚನ ಚಳುವಳಿ, ಸಾಹಿತ್ಯ ಸಂಗಾತಿ, ಜಾನಪದ, ಅನಂತಮೂರ್ತಿ ಕೃತಿಗಳು, ನಿರಂಜನ ಕೃತಿಗಳು (ವಿಮರ್ಶೆ), ಬಸವೇಶ್ವರ ಮತ್ತು ಪುರಂದರದಾಸರು, ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು (ಸಂಶೋಧನೆ), ದಲಿತ ಸೂರ್ಯ, ಕಲ್ಯಾಣ ನಾಡಿನ ಕೆಂಪು ಕವಿತೆಗಳು, ಆಯ್ದ ಕವನಗಳು, ಶರಣರ ಬಂಡಾಯ ವಚನಗಳು, ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು ಎಂಬ ಸಂಪಾದಿತ ಕೃತಿಗಳನ್ನು ಇವರು ರಚಿಸಿದ್ದಾರೆ.

ದೇವರಾಜ ಬಹಾದ್ದೂರ ಪ್ರಶಸ್ತಿ, ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ, ಕುವೆಂಪು ಸಾಹಿತ್ಯ ಪುರಸ್ಕಾರ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ರತ್ನಾಕರ ವರ್ಣಿ, ಮುದ್ದಣ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ ಇವರಿಗೆ ಸಂದ ಪ್ರಮುಖ ಪ್ರಶಸ್ತಿ, ಗೌರವಗಳಗಿದೆ.

No Comments

Leave A Comment