Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಬೇನಾಮಿ ಆಸ್ತಿ: ರಾಬರ್ಟ್ ವಾದ್ರಾ ಹೇಳಿಕೆ ಪಡೆದ ಐಟಿ ಅಧಿಕಾರಿಗಳು

ನವದೆಹಲಿ: ಬೇನಾಮಿ ಆಸ್ತಿ ಪ್ರಕರಣದಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಅವರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಹೇಳಿಕೆ ಪಡೆದುಕೊಂಡಿದ್ದಾರೆ. ಶಸಾಸ್ತ್ರಗಳ ಡೀಲರ್ ಸಂಜಯ್ ಬಂಡಾರಿ ಮೂಲಕ ಇಂಗ್ಲೆಂಡ್ ನಲ್ಲಿ ಅಕ್ರಮವಾಗಿ ಖರೀದಿಸಿರುವ ಆಸ್ತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ವಾದ್ರಾ 2009ರಲ್ಲಿ ನಡೆದ ಪೆಟ್ರೋಲಿಯಂ ಒಪ್ಪಂದದಿಂದ ಪಡೆದ ಕಿಕ್ ಬ್ಯಾಕ್ ಗಳಿಂದ ಇಂಗ್ಲೆಂಡ್ ನಲ್ಲಿ ಆಸ್ತಿ ಖರೀದಿಸಿದ್ದಾರೆ ಎಂಬಂತಹ ಆರೋಪವಿದೆ.  2018ರಲ್ಲಿ ದಾಖಲಾಗಿದ್ದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಡಿಯಿಂದ ಈಗಾಗಲೇ ವಿಚಾರಣೆಗೊಳಪಟ್ಟಿದ್ದಾರೆ.

ಇಂದು ಮಧ್ಯಾಹ್ನ ಪೂರ್ವ ದೆಹಲಿಯ ಸುಖದೇವ್ ವಿಹಾರದಲ್ಲಿರುವ ವಾದ್ರಾ ಕಚೇರಿಗೆ ಐಟಿ ಅಧಿಕಾರಿಗಳು ತೆರಳಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೇ ಇಲಾಖೆಯಿಂದ ಸಮನ್ಸ್ ನೀಡಲಾಗಿತ್ತು. ಆದರೆ, ಕೊರೋನಾ ವೈರಸ್ ಕಾರಣದಿಂದ ವಾದ್ರಾ ಕಾಲಾವಕಾಶ ಪಡೆದುಕೊಂಡಿದ್ದರು.

ರಾಜಸ್ಥಾನದ ಬೀಕನೇರ್ ನಲ್ಲಿ ಬಡ ಜನರ ಪುನರ್ವಸತಿಗಾಗಿ ನೀಡಲಾದ ಭೂಮಿಯನ್ನು ವಾದ್ರಾ ಕಂಪನಿ ಸ್ಕೈ ಲೈಟ್ ಹಾಸ್ಟಿಟಲಿಟಿ ವಶಪಡಿಸಿಕೊಂಡ ಆರೋಪದ ಮೇರೆಗೆ 2015 ಸೆಪ್ಟೆಂಬರ್ ನಲ್ಲಿ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ತನಿಖಾ ಸಂಸ್ಥೆ ದಾಖಲಿಸಿತ್ತು. ತಮ್ಮ ವಿರುದ್ಧದ ಕೇಸ್ ರಾಜಕೀಯ ಪ್ರೇರಿತವಾಗಿದೆ ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ.

No Comments

Leave A Comment