Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಪುತ್ತೂರು: ಮುಖದಲ್ಲಿ ಮೊಡವೆ ಹೆಚ್ಚಾದದ್ದಕ್ಕೆ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ!

: ಚರ್ಮದಲ್ಲಿ ಎಣ್ಣೆಯಂತಹ ಅಂಶದ ಹೆಚ್ಚಳ ಹಾಗೂ ಹಾರ್ಮೋನುಗಳ ಬದಲಾವಣೆಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಮುಖದಲ್ಲಿ ಮೊಡವೆಗಳೇಳುವುದು ಸಾಮಾನ್ಯ. ಸಾಮಾನ್ಯವಾಗಿ ಮನೆಮದ್ದು ಅಥವಾ ಚರ್ಮರೋಗ ತಜ್ಞರ ಸಲಹೆಯೊಂದಿಗೆ ಸಂಪರ್ಕಿಸಿ ಔಷಧಿ ತೆಗೆದುಕೊಂಡು ಇದನ್ನು ನಿವಾರಿಸಿಕೊಳ್ಳಬಹುದು ಆದರೆ ಮುಖದಲ್ಲಿ ಮೊಡವೆ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಪಲ್ತಾಡಿಯ ನಿವಾಸಿ, ಕೆಯ್ಯೂರು ಕರ್ನಾಟಕ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ದಿವ್ಯಾ (15) ಇಂತಹಾ ದುರಂತದ, ಅಚ್ಚರಿಯ ನಿರ್ಧಾರ ತೆಗೆದುಕೊಂಡ ಯುವತಿ.

ಮುಖದಲ್ಲಿ ಕಾಣಿಸಿಕೊಂಡಿದ್ದ ಮೊಡವೆಗುಳ್ಳೆಗಳಿಂದ ದಿವ್ಯಾ ತುಂಬಾ ದುಃಖಿತಳಾಗಿದ್ದಳು ಎನ್ನಲಾಗಿದೆ. ಅವಳು ಆ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದಳುಎಂದು ವರದಿಯಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯ ಮಿತಿಯಲ್ಲಿರುವ ಗೇರುಗುಡ್ಡೆಯಲ್ಲಿ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಲೆ ಪ್ರಾರಂಬವಾದ ಮೊದಲ ದಿನ ಮನೆಯಲ್ಲಿ ಶಾಲೆಗೆ ಹೋಗಿ ಬರುವುದಾಗಿ ಹೇಳಿದ್ದ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಲೀಸರು ವಿವರಿಸಿದ್ದಾರೆ.

No Comments

Leave A Comment