Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಕಾಸರಗೋಡು: ಮನೆಯ ಮೇಲೆ ಮಗುಚಿ ಬಿದ್ದ ವಿವಾಹ ದಿಬ್ಬಣದ ಬಸ್‌ – ಮಗು ಸೇರಿ ಐವರ ದುರ್ಮರಣ

ಕಾಸರಗೋಡು:ವಿವಾಹ ದಿಬ್ಬಣ ಬಸ್ಸು ಮನೆಯೊಂದರ ಮೇಲೆ ಮಗುಚಿ ಬಿದ್ದ ಪರಿಣಾಮ ಮಗು ಸೇರಿದಂತೆ ಐವರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಕೇರಳ ಕರ್ನಾಟಕ ಗಡಿಯ ಪಾಣತ್ತೂರಿನಲ್ಲಿ ನಡೆದಿದೆ.

40 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು, ಕಾಞಂಗಾಡ್ ಹಾಗೂ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ 11 ವರ್ಷದ ಮಗು, ಇಬ್ಬರು ಮಹಿಳೆಯರು ಸೇರಿದ್ದಾರೆ.

ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಸ್ಸು ಮಗುಚಿ ಬಿದ್ದು ಈ ದುರ್ಘಟನೆ ನಡೆದಿದೆ. ಅಪಘಾತಕ್ಕೀಡಾದ ಬಸ್ಸಿನಿಂದ ಎಲ್ಲಾ ಪ್ರಯಾಣಿಕರನ್ನು ಹೊರ ತೆಗೆದು ಆಸ್ಪತ್ರೆಗ ಳಿಗೆ ಸಾಗಿಸಲಾಗಿದೆ.

ಪುತ್ತೂರು ಕಡೆಯಿಂದ ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು ರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಕೊಡಗಿನ ಕರಿಕೆಯಲ್ಲಿ ವಿವಾಹ ಕಾರ್ಯಕ್ರಮಕ್ಕೆ ಕಲ್ಲಪಳ್ಳಿ ಪಾಣತ್ತೂರು ಮೂಲಕ ಈ ಬಸ್ಸು ತೆರಳುತ್ತಿದ್ದಾಗ ಪಾಣತ್ತೂರು ಗಡಿಗುಡ್ಡೆ ಎಂಬಲ್ಲಿ ಮನೆಯೊಂದರ ಮೇಲೆ ಬಸ್ಸು ಬಿದ್ದಿದೆ.

No Comments

Leave A Comment