Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಕೇಂದ್ರ ಸಚಿವ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರಿಗೆ ಶುಗರ್‌ ಲೋ ಆರೋಗ್ಯದಲ್ಲಿ ಏರುಪೇರು- ಜಿರೋ ಟ್ರಾಫಿಕ್ ನಲ್ಲಿ ಬೆ೦ಗಳೂರಿನ ಆಸ್ಪತ್ರೆಗೆ

ಚಿತ್ರದುರ್ಗ: ಕೇಂದ್ರ ಸಚಿವ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರು ಅನಾರೋಗ್ಯದ ಹಿನ್ನೆಲೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಗರ್‌ ಲೋ ಆದ ಕಾರಣ ಸದಾನಂದ ಗೌಡ ಅವರು ಅಸ್ವಸ್ಥರಾಗಿದ್ದು, ಅವರನ್ನು ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗದಲ್ಲಿ ಬಿಜೆಪಿ ಸಭೆ ಮುಗಿಸಿ ಬರುವಾಗ ಘಟನೆ ನಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದೀಗ ಎಲ್ಲರ ಬಳಿಯಲ್ಲಿ ಮಾತನಾದಿದ್ದಾರೆ.ಅದರೆ ಅವರಿಗೆ ಚಿಕಿತ್ಸೆಯು ಅಗತ್ಯವಿರುವುದರಿ೦ದ ಬೆ೦ಗಳೂರಿನ ಆಸ್ಪತ್ರೆಗೆ ಕರೆದುಕೊ೦ಡು ಹೋಗಲಾಗುತ್ತದೆ ಎ೦ದು ವರದಿಗಳು ತಿಳಿಸಿದೆ.

No Comments

Leave A Comment