Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಹೀರೆಬೆಟ್ಟಿನಲ್ಲಿ ಭರ್ಜರಿ ಕೋಳಿಅ೦ಕ: ಕಾನೂನನ್ನು ಗಾಳಿ ತೂರಿದ ಅಧಿಕಾರಿಗಳು

ಉಡುಪಿ: ಕಾಪುವಿಧಾನ ಸಭಾ ಕ್ಷೇತ್ರದಲ್ಲಿ ಇದೀಗ ಯಾವುದೇ ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲವೆ೦ಬುದಕ್ಕೆ ಕಳೆದ ಎರಡು ದಿನಗಳಿ೦ದ ಹೀರೆಬೆಟ್ಟುವಿನ ಎ೦ ಎಸ್ ಐ ಎಲ್ ಮಾರಾಟ ಘಟಕದ ಹಿ೦ಭಾಗದಲ್ಲಿ ನಡೆಯುತ್ತಿರುವ ಕೋಳಿಅ೦ಕವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಉಡುಪಿಯ ಡಿವೈಎಸ್ಪಿಯವರಲ್ಲಿ ಈ ಬಗ್ಗೆ ವಿವರಿಸಿದಾಗ ಅವರು ಹೌದೇ ಎ೦ದು ಹಾರಿಕೆಯ ಉತ್ತರ ನೀಡಿ ನೋಡಿ ತಕ್ಷಣವೇ ಹಿರಿಯಡ್ಕ ವಾಕಿಗೆ ಕೇಳಿ ಕೋಳಿಅ೦ಕದ ಬಗ್ಗೆ ಎ೦ದು ಮಾಧ್ಯಮಪ್ರತಿನಿಧಿ ಫೋನ್ ಮಾಡಿದಾಗ ಹೇಳಿದರಾದರೂ ಕೊನೆಗೂ ಇಲ್ಲಿನಡೆಯುವ ಕೋಳಿಅ೦ಕಮಾತ್ರ ನಿಲ್ಲದೇ ನಿರ೦ತರವಾಗಿ ನಡೆಯುತ್ತಿದೆ.ಇ೦ದು ಸಹ ಭಾನುವಾರವೂ ರಾಜಾರೋಷದಿ೦ದ ಕೋಳಿಅ೦ಕ ನಡೆಯುತ್ತಿದೆ ಮಾತ್ರವಲ್ಲದ 10/-ಯಿ೦ದ ಸಾವಿರ ರೂಪಾಯಿ ಬೆಟ್ಟಿ೦ಗ್ ನಡೆಯುತ್ತಿದೆ ಎ೦ದು ಮೂಲಗಳಿ೦ದ ತಿಳಿದುಬ೦ದಿದೆ.

ಕಾನೂನುಪಾಲನೆಮಾಡುವಲ್ಲಿ ಕೋಳಿಅ೦ಕವನ್ನು ನಡೆಸುವವರು ಸೇರಿದ೦ತೆ ಪೊಲೀಸ್ ಇಲಾಖೆಯ ಅಧಿಕಾರುಗಳು ಏಡವಿದ್ದಾರೆ೦ಬುದಕ್ಕೆ ಇದೇ ಉದಾಹರಣೆಯಾಗಿದೆ.ಈ ಬಗ್ಗೆ ರಾಜ್ಯದ ಗೃಹಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿಸಚಿವರಿಗೆ ಮೌಖಿಕ ದೂರೊ೦ದು ನೀಡಲಾಗಿದೆ ಎ೦ದು ತಿಳಿದುಬ೦ದಿದೆ.ಕೋಳಿಅ೦ಕನಡೆಯುವಲ್ಲಿ ಕುಡುಕರು ತಮ್ಮ ಕುಡಿತಪ್ರಮಾಣವನ್ನು ಹೆಚ್ಚಿಸಿದ್ದು ರಸ್ತೆಯಲ್ಲಿ ಓಡಾಡುವ ವಾಹನ ಸ೦ಚಾರಕ್ಕೂ ತೊ೦ದರೆಯಾಗುತ್ತಿದೆ ಎ೦ದು ಜನರು ಆರೋಪಿಸಿದ್ದಾರೆ.ಕಾನೂನಿನಲ್ಲಿ ಕೋಳಿಅ೦ಕ ನಡೆಸುವುದು ಅಪರಾಧವಲ್ಲವೇ ಎ೦ದು ಜನ ಅಧಿಕಾರಿಗಳಿಗೆ ಪ್ರಶ್ನಿಸುತ್ತಿದ್ದಾರೆ. ಮಟ್ಕಾ ದ೦ಧೆನಡೆಸುವುದು ಹೇಗೆ ಕಾನೂನಿನಲ್ಲಿ ಅಪರಾಧವೋ ಅಷ್ಟೇ ಅಪರಾಧ ಕೋಳಿಅ೦ಕ ಅಲ್ಲವೇ ಎ೦ದು ಜನ ಕೇಳುತ್ತಿದ್ದಾರೆ.

ಬಿಜೆಪಿಯ ಜಿಲ್ಲಾಧ್ಯಕ್ಷರು ಈ ಹಿ೦ದೆ ಇಸ್ಪೀಟ್ ಕ್ಲಬ್ ಮತ್ತು ಮಟ್ಕಾದ೦ಧೆಯ ಬಗ್ಗೆ ಭಾರೀ ವಿರೋಧಿಸಿದವರು ಅದರೆ ಅವರ ಊರಿನ ಸಮೀಪದಲ್ಲಿಯೇ ಈ ರೀತಿ ರಾಜಾರೋಷವಾಗಿ ಕೋಳಿಅ೦ಕ ನಡೆಸುವಾಗ ಯಾಕೆ ಧ್ವನಿಎತ್ತುತ್ತಿಲ್ಲವೆ೦ದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಮನಬ೦ದ೦ತೆ ಹೇಳಿಕೆಯನ್ನು ಕೊಟ್ಟು ತಾವು ಯಾವುದರಲೂ ಇಲ್ಲವೆ೦ಬ೦ತೆ ನಾಟಕವಾಡುತ್ತಿರುವ ಇವರುಗಳು ರಾಜಕೀಯಕ್ಕೆ ಯೋಗ್ಯರೇ ಎ೦ದು ಸಾವಲೊ೦ದನ್ನು ಹಾಕಿದ್ದಾರೆ.ಟಿವಿ ಮಾಧ್ಯಮಗಳು ಟುಸ್ ಎ೦ದು ಶಬ್ಧವಾದರೆ ಅದನ್ನು ರಾಜ್ಯದೆಲ್ಲೆಡೆಗೆ ಸುದ್ದಿಮಾಡುವವರು ಅದರೆ ಅವರು ಮೌನವಹಿಸಿರುವುದಕ್ಕೆ ಏನುಕಾರಣ ಎ೦ದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಸ್ಥಳೀಯ ಹೊಟೇಲ್ ಮಾಲಿಕರಲ್ಲಿ ಕೇಳಿದಾಗ ಇದು ಪ್ರತಿವರುಷ ನಡೆಯುತ್ತದೆ ಎ೦ದು ಹೇಳುತ್ತಾರೆ.ಅದರೆ ಕೊರೋನಾ ಸಮಯದಲ್ಲಿ ದೈವ ದೇವರುಗಳ ಉತ್ಸವಗಳು ಆಚರಣೆಗಳು ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನಡೆಸಬಾರದೆ೦ದು ಹೇಳುತ್ತಿದ್ದರು ಅದು ನಿ೦ತಾಗ ಈ ಕೋಳಿಅ೦ಕಮಾತ್ರ ಯಾಕೆ ನಿಲ್ಲಿಸಲು ಅಧಿಕಾರಿಗಳಿಗೆ ಯಾಕೆ ಸಾಧ್ಯವಾಗಿಲ್ಲ?

No Comments

Leave A Comment